ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಯುವ ಸಮಾವೇಶ ಮಾಡುವ ಮೂಲಕ ಎಂಇಎಸ್ ಪುಂಡಾಟ

ಬೆಳಗಾವಿ: ಬೆಳಗಾವಿಯ ಶಹಾಪುರದಲ್ಲಿ ಎಂಇಎಸ್ ಪುಂಡರು ಮಹಾರಾಷ್ಟ್ರ ಎಂಎಲ್‌ಎ ಆಹ್ವಾನಿಸಿ ಎಂಇಎಸ್ ಯುವ ಸಮಾವೇಶ ಮಾಡುವ ಮೂಲಕ ಮತ್ತೆ ಪುಂಡಾಟ ಮೆರೆದು ನಾಡದ್ರೋಹಿ ಕೆಲಸಕ್ಕೆ ಕೈ ಹಾಕಿದ್ದಾರೆ.‌

ಮಹಾರಾಷ್ಟ್ರದ ಸಾಂಗಲಿ ಜಿಲ್ಲೆ ತಾಸ್ಗಾಂವ್ ಕ್ಷೇತ್ರದ ಎಸ್‌ಸಿಪಿ ಶಾಸಕ ರೋಹಿತ್ ಪಾಟೀಲ್ ಕರೆಯಿಸಿ ಸಮಾವೇಶ ಮಾಡಲಾಗಿದೆ. ಈ ವೇಳೆ ಯುವಕರೂ ಒಗ್ಗೂಡಿ, ಗಡಿ ಹೋರಾಟದಲ್ಲಿ ಭಾಗಿಯಾಗಿ, ಗಡಿಭಾಗದಲ್ಲಿ ಮರಾಠಿಗರ ಮೇಲೆ ಆಗುತ್ತಿರುವ ಅನ್ಯಾಯ, ದೌರ್ಜನ್ಯ ದೂರ ಮಾಡಲು ಒಗ್ಗೂಡಿ ಎಂದು ಮಹಾರಾಷ್ಟ್ರ ಶಾಸಕ ಕರೆ ಕೊಟ್ಟಿದ್ದಾರೆ.

ಇದೇ ವೇಳೆ ಮಾಜಿ ಶಾಸಕ, ಎಂಇಎಸ್ ಮುಖಂಡ ಮನೋಹರ್ ಕಿಣೇಕರ್ ಭಾಷಣ ಮಾಡಿದ್ದು, ಇನ್ಮುಂದೆ ಕರ್ನಾಟಕದಲ್ಲಿ ಹೋರಾಟ ಮಾಡಲ್ಲ. ಕರ್ನಾಟಕದಲ್ಲಿ ಹೋರಾಟ ಮಾಡಿದ್ರೆ ನಮ್ಮ ಯುವಕರ ಮೇಲೆ ಕೇಸ್ ಹಾಕ್ತಾರೆ. ನಮ್ಮ ಯುವಕರ ಭವಿಷ್ಯ ಹಾಳಾಗುತ್ತೆ, ಹೀಗಾಗಿ ಇನ್ಮುಂದೆ ಮಹಾರಾಷ್ಟ್ರದಲ್ಲಿ ಹೋರಾಟ ಮಾಡ್ತೀವಿ. ಜನವರಿ 17ರಂದು ಕೊಲ್ಹಾಪುರದಲ್ಲಿ ಹೋರಾಟ ಮಾಡುವುದಾಗಿ ಕರೆ ನೀಡಿದ್ದಾರೆ.

Edited By : Suman K
Kshetra Samachara

Kshetra Samachara

13/01/2025 03:39 pm

Cinque Terre

17.86 K

Cinque Terre

1

ಸಂಬಂಧಿತ ಸುದ್ದಿ