ಬೆಳಗಾವಿ: ಬೆಳಗಾವಿಯಲ್ಲಿ ರೌಡಿ ಶೀಟರ್ ಪ್ರಫುಲ್ ಪಾಟೀಲ್ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಂಡಿನ ದಾಳಿ ಆಗಿರೋ ಬಗ್ಗೆ ಸೋಕೋ ತಂಡದಿಂದ ಪರಿಶೀಲನೆ ನಡೆಸಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ನಗರ ಪೊಲೀಸ್ ಆಯುಕ್ತರು ಮಾಹಿತಿ ಪಡೆದುಕೊಂಡಿದ್ದಾರೆ.
ಪ್ರಫುಲ್ ಪಾಟೀಲ್ ಮೇಲೆ ದಾಳಿ ಆದಾಗ ಸ್ವತಃ ಕಾರು ಚಾಲನೆ ಮಾಡಿ ಆತ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ, ಖಾಸಗಿ ಆಸ್ಪತ್ರೆ ಮುಂದೆ ಕಾರ್ ಪಾರ್ಕ್ ಮಾಡಿದ್ದು, ಸೋಕೋ ಅಧಿಕಾರಿಗಳ ತಂಡದಿಂದ ಕಾರು ಪರಿಶೀಲನೆ ಮಾಡಿದ್ದಾರೆ. ಇದೇ ವೇಳೆ ಸ್ಥಳಕ್ಕೆ ಭೇಟಿ ನೀಡಿದ ನಗರ ಪೊಲೀಸ್ ಆಯುಕ್ತರು ಯಡಾ ಮಾರ್ಟಿನ್ ಅವರು ಸೋಕೋ ತಂಡದಿಂದ ಮಾಹಿತಿ ಪಡೆದಿದ್ದಾರೆ.
ಬೆಳಗಾವಿ ಶಾಹು ನಗರದ ನಿವಾಸಿ ಪ್ರಫುಲ್ ಪಾಟೀಲ್ (30) ಎಂಬಾತನ ಮೇಲೆ ಬೆಳಗಾವಿ ಹಿಂದೂ ನಗರದ ಗಣೇಶಪುರ ರಸ್ತೆಯಲ್ಲಿ ಗುಂಡಿನ ದಾಳಿ ನಡೆದಿತ್ತು. ಸದ್ಯ ಪ್ರಫುಲ್ ಪಾಟೀಲ್ ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಸ್ಥಳದಲ್ಲಿ ಗ್ರಾಮೀಣ ಪೊಲೀಸ್ ಠಾಣೆ ಸಿಪಿಐ ಮಂಜುನಾಥ ಹಿರೇಮಠ ಕೂಡಾ ಪರಿಶೀಲನೆ ನಡೆಸಿದ್ದಾರೆ.
Kshetra Samachara
10/01/2025 01:28 pm