ಬೆಳಗಾವಿ: ಬೆಳಗಾವಿಯಲ್ಲಿ ಅಪರಿಚಿತರಿಂದ ರೌಡಿ ಶೀಟರ್ ಮೇಲೆ ಗುಂಡಿನ ದಾಳಿ ನಡೆದ ಘಟನೆ ಶುಕ್ರವಾರ ಬೆಳ್ಳಂಬೆಳಗ್ಗೆ ಗಣೇಶಪುರದ ಹೊರ ವಲಯದಲ್ಲಿ ನಡೆದಿದೆ.
ಶಾಹುನಗರ ನಿವಾಸಿ ರೌಡಿ ಶೀಟರ್ ಪ್ರಫುಲ್ ಪಾಟೀಲ್ ಮೇಲೆ ಗುಂಡಿನ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಬೆಳಗುಂದಿ ಗ್ರಾಮದಿಂದ ಚಲಿಸುವ ಕಾರಿನಲ್ಲಿ ಹೊರಟಾಗ ಗುಂಡಿನ ದಾಳಿ ಮಾಡಿ ಹತ್ಯೆಗೆ ದುಷ್ಕರ್ಮಿಗಳು ಯತ್ನಿಸಿದ್ದಾರೆ. ದಾಳಿ ವೇಳೆ ಕಾರಿನ ಗ್ಲಾಸ್‌ಗೆ ಗುಂಡು ತಗುಲಿದೆ. ಈ ಘಟನೆಯಲ್ಲಿ ಅದೃಷ್ಟವಶಾತ್ ಪ್ರಫುಲಗ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಕಾರಿನ ಗಾಜುಗಳು ಮುಖ, ತಲೆ ಭಾಗಕ್ಕೆ ಸಿಡಿದು ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ಗಾಯಾಳನ್ನು ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
PublicNext
10/01/2025 11:39 am