ಬೆಳಗಾವಿ: ಪರಸ್ತ್ರೀ ಜೊತೆಗೆ ಮೂವರು ಮಕ್ಕಳ ತಂದೆ ಪರಾರಿ - ಬೀದಿಗೆ ಬಂದ ಹೆಂಡತಿ, ಮಕ್ಕಳು
ಬೆಳಗಾವಿ: ವ್ಯಕ್ತಿಯೊಬ್ಬ 20ಲಕ್ಷ ಕೈ ಸಾಲ ಮಾಡಿಕೊಂಡಿದ್ದಾನಂತೆ. ಮಾಡಿದ ಸಾಲವನ್ನು ತೀರಿಸಲು ಎರಡು ಸೈಟ್, ಕಾರು, ಚಿನ್ನಾಭರಣ ಹೊಂದಿದ್ದ ಪರಸ್ತ್ರೀ ಜೊತೆಗೆ ಕಿಲಾಡಿ ಗಂಡ ಪರಾರಿ ಆಗಿದ್ದು, ಆತನ ಹೆಂಡತಿ ಬೀದಿಗೆ ಬಂದಿದ್ದಾಳೆ.
ಈ ಎಲ್ಲ ವಿಚಿತ್ರ ಘಟನೆಗೆ ಸಾಕ್ಷಿ ಆಗಿದ್ದು ಬೆಳಗಾವಿ ತಾಲೂಕಿನ ಮಾರಿಹಾಳ ಗ್ರಾಮದಲ್ಲಿ, ಮಾರಿಹಾಳ ಗ್ರಾಮದ ಬಸವರಾಜ್ ಎಂಬಾತ ಮಾಸಾಬಿ ಸೈಯದ್ ಎಂಬ ವಿವಾಹಿತ ಮಹಿಳೆಯೊಂದಿಗೆ ಆಕೆಯ ಇಬ್ಬರು ಮಕ್ಕಳು ಹಾಗೂ ತನ್ನೊಬ್ಬ ಪುತ್ರನ ಜೊತೆಗೆ ಓಡಿಹೋಗಿದ್ದಾನೆ. ಇತ್ತ ಕಿಲಾಡಿ ಗಂಡನ ವರ್ತನೆಗೆ ಬಸವರಾಜನ ಪತ್ನಿ ವಾಣಿಶ್ರೀ ಶಾಕ್‌ಗೆ ಒಳಗಾದ್ರೆ ಬಸವರಾಜನ ಜತೆಗೆ ಓಡಿ ಹೋದ ವಿವಾಹಿತೆ ಮಾಸಾಬಿ ಪತಿ ಆಸೀಫ್ ಸೈಯದ್ ಕೂಡ ಬೀದಿಗೆ ಬಂದಿದ್ದಾನೆ. ಎರಡು ಪುಟ್ಟ ಮಕ್ಕಳ ಜೊತೆಗೆ ಗ್ರಾಮ ಪಂಚಾಯತಿ ಸದಸ್ಯೆ ವಾಣಿಶ್ರೀ ಬೀದಿಪಾಲಾಗಿದ್ದಾಳೆ. ಹೆಂಡತಿ, ಮಕ್ಕಳಿಗಾಗಿ ತಂದೆ-ತಾಯಿಯನ್ನ ದೂರು ಮಾಡಿದ ಹೆಂಡತಿ ತವರು ಊರಿನಲ್ಲಿ ಬದುಕು ಕಟ್ಟಿಕೊಂಡಿದ್ದ ಲಾರಿ ಚಾಲಕ ಆಸೀಫ್‌ನ ಬದುಕು ಕೂಡ ಬೀದಿಗೆ ಬಂದಿದ್ದೆ. ಇಬ್ಬರದ್ದು ಒಂದೇ ಕೂಗು ಒಂದು ಓಡಿಹೋದವರು ಮರಳಿ ಬರಬೇಕು ಎಂಬುವುದು.
ಇನ್ನೂ ಮಾರಿಹಾಳ ಗ್ರಾಮದ ಮಾಸಾಬಿ ಜೊತೆಗೆ ಪರಾರಿಯಾದ ಬಸವರಾಜ್ ಸೀತಿಮನಿ ಆನ್‌ಲೈನ್ ಮತ್ತು ಆಫ್‌ಲೈನ್ ಅಡ್ಡಾಗಳಲ್ಲಿ ಜೂಜಾಟದ ಚಟಕ್ಕೆ ಬಲಿಯಾಗಿ ಸುಮಾರು 20ಲಕ್ಷ ಸಾಲ ಮಾಡಿಕೊಂಡಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾಳೆ. ಪತಿಯ ಪರಸ್ತ್ರೀ ವ್ಯಾಮೋಹ ತಡೆಯಲು ಮುಂದಾದಾಗ ಪತಿ ಬಸವರಾಜ ಹಲ್ಲೆ ಮಾಡಿದ್ದಾನೆ. ಪ್ರಕರಣ ಸಂಬಂಧ ಪೊಲೀಸ್ ಠಾಣೆಗೆ ಅಲೆದಾಡಿದ್ರೂ ನ್ಯಾಯ ಸಿಕ್ಕಿಲ್ಲವಂತೆ. ಹೀಗಾಗಿ ಪತಿ - ಪುತ್ರನನ್ನು ಹುಡುಕಿಕೊಡುವಂತೆ ಪೊಲೀಸರಿಗೆ ವಾಣಿಶ್ರೀ ಮನವಿ ಮಾಡಿಕೊಂಡಿದ್ದಾಳೆ. ಇನ್ನೂ ಹಣ, ಕಾರು, ಸೈಟ್ ದಾಖಲೆ ಪತ್ರ ಸಮೇತ ಪತ್ನಿ ಮಾಸಾಬಿ ಓಡಿಹೋಗಿದ್ದಕ್ಕೆ ಪತಿ ಆಸೀಫ್ ಕೂಡ ಕಂಗಾಲಾಗಿದ್ದು ವೃತ್ತಿಯಲ್ಲಿ ಲಾರಿ ಚಾಲಕನಾಗಿದ್ದುಕೊಂಡೇ ಪತ್ನಿ ಮಾಸಾಬಿ ಹೆಸರಲ್ಲಿ ಕಾರು, ಎರಡು ಸೈಟ್‌ಗಳನ್ನು ಆಸೀಫ್ ಖರೀದಿ ಮಾಡಿದ್ದಾನೆ. ಅಲ್ಲದೇ ದುಡಿದು ಮನೆಯಲ್ಲಿಟ್ಟಿದ್ದ ಐದು ಲಕ್ಷ ಹಣ, ಪತ್ನಿಗೆ ಆಸೀಫ್ ಕೊಡಿಸಿದ್ದ 60 ಗ್ರಾಂ ಬಂಗಾರ, ಹಣ, ಕಾರು, ಸೈಟ್ ಖರೀದಿ ಪತ್ರ, ಚಿನ್ನಾಭರಣ ಸಮೇತ ಮಕ್ಕಳಿಬ್ಬರ ಜೊತೆಗೆ ಮಾಸಾಬಿ ಬಸವರಾಜ್ ಪರಾರಿ ಆಗಿದ್ದು ಈಗಾಗಲೇ ಪತ್ನಿ, ಮಕ್ಕಳನ್ನು ಹುಡುಕಿಕೊಡಿ ಎಂದು ಮಾರಿಹಾಳ ಠಾಣೆಗೆ ದೂರು ನೀಡಿದ್ದಾನೆ. ಇತ್ತ ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬೆಳಗಾವಿ ಕಮಿಷನರ್ ಯಡಾ ಮಾರ್ಟಿನ್ ನಾಪತ್ತೆ ಆಗಿರುವ ಜೋಡಿಗಳ ಪತ್ತೆಗೆ ವಿಶೇಷ ತಂಡವನ್ನು ರಚಿಸಿದ್ದಾರೆ.
ಪ್ರಲ್ಹಾದ ಪೂಜಾರಿ, ಬೆಳಗಾವಿ
PublicNext
09/01/2025 10:53 pm