ಬೆಳಗಾವಿ: ಅನಗೋಳದ ಛತ್ರಪತಿ ಧರ್ಮವೀರ ಸಂಭಾಜಿ ವೃತ್ತದಲ್ಲಿ ಧರ್ಮವೀರ ಸಂಭಾಜಿ ಮಹಾರಾಜರ ಪುತ್ಥಳಿ ಅನಾವರಣ ಸಂದರ್ಭದಲ್ಲಿ ಮಹಾರಾಷ್ಟ್ರ ಸಚಿವ ಶಿವೇಂದ್ರರಾಜೇ ಅವರು ಜೈ ಮಹಾರಾಷ್ಟ್ರ ಎಂದು ಘೋಷಣೆ ಮಾಡಿದ್ದು ಪಕ್ಕದಲ್ಲಿಯೇ ಇದ್ದ ಶಾಸಕ ಅಭಯ್ ಪಾಟೀಲ್ ಹಾಗೂ ಮೇಯರ್, ಉಪಮೇಯರ್ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದನ್ನು ಖಂಡಿಸಿ ಕನ್ನಡ ಸಂಘಟನೆಗಳು ಇಂದು ಮಹಾನಗರ ಪಾಲಿಕೆಗೆ ನುಗ್ಗುವ ಪ್ರಯತ್ನ ನಡೆಯಿತು.
ಕರ್ನಾಟಕ ಸರ್ಕಾರದ ಅನುದಾನದಲ್ಲಿ ಪ್ರತಿಮೆಯನ್ನು ನಿರ್ಮಿಸಿ ಸ್ಥಾಪಿಸಲು ಅವಕಾಶ ಕೊಡಲಾಗಿದ್ದು, ಈಗ ಉದ್ಘಾಟನಾ ಸಂದರ್ಭದಲ್ಲಿ ಜೈ ಮಹಾರಾಷ್ಟ್ರ ಘೋಷಣೆ ಕೂಗಿ ಕನ್ನಡನಾಡಿಗೆ ಅವಮಾನಗೊಳಿಸಲಾಗಿದೆ. ಅಲ್ಲಿಯೇ ಇದ್ದ ಶಾಸಕರು, ಮೇಯರ್ ಮತ್ತು ಉಪಮೇಯರ್ ಚಪ್ಪಾಳೆ ತಟ್ಟುವುದರ ಮೂಲಕ ಈ ನಾಡದ್ರೋಹಿ ಕೃತ್ಯವನ್ನು ಪ್ರೋತ್ಸಾಹಿಸಿದ್ದಾರೆ.
ತಕ್ಷಣವೆ ಶಾಸಕ ಅಭಯ್ ಪಾಟೀಲ್ ಅವರನ್ನು ಬಂಧಿಸಬೇಕು. ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಮೇಯರ್ ಮತ್ತು ಉಪಮೇಯರ್ ಅವರನ್ನು ಪಾಲಿಕೆ ಆಡಳಿತದಿಂದ ವಜಾ ಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರ ಹೋರಾಟ ಮಾಡಲಾಗುವುದು ಎಂದು ಕನ್ನಡ ಸಂಘಟನೆಗಳ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.
PublicNext
10/01/2025 07:08 pm