ಬೆಳಗಾವಿ: ಬೆಳಗಾವಿಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕಾಕ್ಲಿಯರ್ ಇಂಪ್ಲಾಂಟ್ ಸರ್ಜರಿಯನ್ನು ಯಶಸ್ವಿಯಾಗಿ ಜರುಗಿಸಲಾಯಿತು.
ಬಿಮ್ಸ್ ನಿರ್ದೇಶಕರಾದ ಡಾ.ಅಶೋಕ ಶೆಟ್ಟಿ, ವೈದ್ಯಕೀಯರ ಆಧೀಕ್ಷಕರಾದ ಡಾ.ಈರಣ್ಣ ಪಲ್ಲೇದ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ವಿಶ್ಚಲ ಶಿಂದೆ ಅವರ ನೇತೃತ್ವದಲ್ಲಿ ಹಿರಿಯ ಕ್ಯಾಕ್ಲಿಯರ್ ಇಂಪ್ಲಾಂಟ್ ಶಸ್ತ್ರ ಚಿಕಿತ್ಸಕರಾದ ಡಾ. ರಮೇಶ ಕುಲಕೋಡ, ಇ.ಎನ್.ಟಿ. ಶಸ್ತ್ರ ಚಿಕಿತ್ಸೆ ತಜ್ಞರಾದ ಡಾ.ಕೃತಿ.ಎಸ್, ಇ.ಎನ್.ಟಿ. ವಿಭಾಗದ ಮುಖ್ಯಸ್ಥರಾದ ಡಾ ಡಾ.ಸತೀಶ ಬಾಗೇವಡಿ ಅವರ ಮಾರ್ಗದರ್ಶನದಲ್ಲಿ ಡಿಸೆಂಬರ್ 12 ರಂದು ನಾಲ್ಕು ವರ್ಷದ 2 ಮಕ್ಕಳಿಗೆ ಯಶಸ್ವಿಯಾಗಿ ಕಾಕ್ಲಿಯರ್ ಇಂಪ್ಲಾಂಟ್ ಸರ್ಜರಿ ಮಾಡಲಾಯಿತು.
ಕ್ಲಾಕ್ಲಿಯರ್ ಇಂಪ್ಲಾಂಟ್ ಒಂದು ಅತ್ಯಾಧುನಿಕ ಎಲೆಕ್ಟ್ರಾನಿಕ್ ಸಾಧನವಾಗಿದ್ದು ತೀವ್ರವಾದ ಸಂವೇಧನಾಶೀಲ ಶ್ರವಣ ನಷ್ಟ ಹೊಂದಿರುವ ಮಕ್ಕಳಿಗೆ ಅದರಲ್ಲೂ 6 ವರ್ಷದ ಒಳಗಿನ ಚಿಕ್ಕಮಕ್ಕಳಿಗೆ ಶ್ರವಣವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ.
ಸಾಂಪ್ರದಾಯಿಕ ಶ್ರವಣ ಸಾಧನಗಳಿಂದ ಹೆಚ್ಚಿನ ಪ್ರಯೋಜನೆ ಪಡೆಯದೆ ಇರುವಂತಹವರಿಗೆ ಕರ್ನಾಟಕ ಸರ್ಕಾರವು 06 ವರ್ಷದ ಒಳಗಿನ ಶ್ರವಣ ದೋಷವುಳ್ಳ ಚಿಕ್ಕಮಕ್ಕಳಿಗೆ ಶಸ್ತ್ರ ಚಿಕಿತ್ಸೆಯನ್ನು ಸಂಪೂರ್ಣ ಉಚಿತಗೊಳಿಸಿದೆ ಎಂದು ಜಿಮ್ಸ್ ವೈದ್ಯಕೀಯ ಅಧೀಕ್ಷಕರು
Kshetra Samachara
10/01/2025 06:57 pm