ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ : ಮಹಾನಗರ ಪಾಲಿಕೆಯಿಂದ ಅರ್ಜಿ ಆಹ್ವಾನ

ಬೆಳಗಾವಿ:  ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯ ಸನ್ 2024-25ನೇ ಸಾಲಿನ ಎಸ್.ಎಫ್.ಸಿ ಮುಕ್ತ ನಿಧಿ ಯೋಜನೆಯಡಿ ಸಣ್ಣ ಉದ್ದಿಮೆದಾರರಿಗೆ ಸಹಾಯಧನ ಕಾರ್ಯಕ್ರಮ, ಶಿಕ್ಷಣ-ಲ್ಯಾಪ್‌ಟಾಪ್, ಇತರೇ ಬಡ ವಿಧ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಸಹಾಯಧನ ಒದಗಿಸುವುದು, ಶಸ್ತ್ರ ಚಿಕಿತ್ಸೆಗೆ ಧನ ಸಹಾಯ ನೀಡುವ ಕಾರ್ಯಕ್ರಮ, ಸಾಂಸ್ಕೃತಿಕ ಹಾಗೂ ಇತರೆ ವ್ಯಾಸಂಗೇತರ ಚಟುವಟಿಕೆಗಳಲ್ಲಿ ಭಾಗಹಿಸುವ ವಿಧ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಸ್ಪರ್ಧಾತ್ಮಕ ಪರೀಕ್ಷೆ ನೋಂದಾಯಿತ ತರಬೇತಿ ಸಂಸ್ಥೆಗಳ ಮೂಲಕ ಅನುದಾನ ಒದಗಿಸುವ ಕುರಿತು, ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕಾಗಿ ಸಹಾಯ ಧನ, ಪೌರಕಾರ್ಮಿಕ ಮಕ್ಕಳಿಗೆ ಆರೋಗ್ಯ ನಿರೀಕ್ಷಕರ ತರಬೇತಿ ನೀಡುವ ಕಾರ್ಯಕ್ರಮ, ಸಫಾಯಿ ಕರ್ಮಚಾರಿ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಪ್ರೋತ್ಸಾಹ ಧನ, ವಿಕಲಚೇತನರಿಗೆ ವೀಲ್ ಚೇರ್, ತ್ರಿಚಕ್ರ ವಾಹನ ಒದಗಿಸುವ ಕುರಿತು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ದಿನಾಂಕ:15-01-2025 ಕೊನೆಯ ದಿನವಾಗಿದೆ. ಅರ್ಜಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಮಹಾನಗರ ಪಾಲಿಕೆಯ ನಗರ ಬಡತನ ನಿರ್ಮೂಲನಾ ಕೋಶ ಸಂಪರ್ಕಿಸಬಹುದಾಗಿದೆ ಎಂದು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Edited By : PublicNext Desk
Kshetra Samachara

Kshetra Samachara

09/01/2025 07:52 pm

Cinque Terre

3.62 K

Cinque Terre

0

ಸಂಬಂಧಿತ ಸುದ್ದಿ