ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಹಸಿರು ಬೆಳಗಾವಿಗೆ ಪಾಲಿಕೆ ಅಧಿಕಾರಿಗಳ ಸ್ಮಾರ್ಟ್ ವರ್ಕ್

ಬೆಳಗಾವಿ: ಹಸಿರು ಬೆಳಗಾವಿ ನಗರ ನಿರ್ಮಾಣಕ್ಕೆ ಮಹಾನಗರ ಪಾಲಿಕೆ ಪಣ ತೊಟ್ಟಿದೆ. ಆ ನಿಟ್ಟಿನಲ್ಲಿ ರಸ್ತೆ ವಿಭಜಕಗಳಲ್ಲಿ ಸಸಿಗಳನ್ನು ನೆಡಲಾಗಿದ್ದು. ಅವುಗಳಿಗೆ ನೀರುಣಿಸಲು ಪಾಲಿಕೆ ಅಧಿಕಾರಿಗಳು ಡಿಫ್ರೆಂಡ್ ಐಡಿಯಾಗೆ ಕೈ ಹಾಕಿದ್ದಾರೆ.

ಚಳಿಗಾಲ ಅಧಿವೇಶನ ಆರಂಭವಾಗುವ ಮುನ್ನ ಪ್ರಮುಖ ವೃತ್ತಗಳ ಗೋಡೆಗಳ ಮೇಲೆ ಬಣ್ಣ ಬಣ್ಣದ ಚಿತ್ರಗಳನ್ನು ಬಿಡಿಸಿ ಅಂದಗೊಳಿಸಲಾಗಿತ್ತು. ರಸ್ತೆ ವಿಭಜಕಗಳಿಗೆ ಬಣ್ಣ ಬಳಿದು, ಅಲಂಕಾರಿಕ ಸಸಿಗಳನ್ನು ನೆಡಲಾಗಿತ್ತು. ಪ್ರತಿ ಸಸಿಗೂ ಬಳಸಿ ಬೀಸಾಕಿದ ಪ್ಲಾಸ್ಟಿಕ್ ಬಾಟಲಿಗಳನ್ನು ಕೊರೆಸಿ ಅಳವಡಿಸಿ, ಅವುಗಳ ಮೂಲಕ ನೀರು ಪೂರೈಸಲಾಗುತ್ತಿತ್ತು. ಆದರೆ, ಇದು ವರ್ಕೌಟ್ ಆಗಲಿಲ್ಲ. ಈಗ ಹೊಸ ಪ್ರಯೋಗಕ್ಕೆ ಮುಂದಾಗಿರುವ ಪಾಲಿಕೆ ಅಧಿಕಾರಿಗಳು ಹನಿ ನೀರಾವರಿ ಪದ್ಧತಿಗೆ ಮುಂದಾಗಿದ್ದಾರೆ.

ಸದ್ಯ ನಗರದ ಶ್ರೀಕೃಷ್ಣದೇವರಾಯ ವೃತ್ತದ ಬಳಿ ಪ್ರಾಯೋಗಿಕವಾಗಿ ಹನಿ ನೀರಾವರಿ ವ್ಯವಸ್ಥೆ ಕೈಗೊಳ್ಳಲಾಗಿದೆ. ರಸ್ತೆ ವಿಭಜಕದ ಮೇಲೆ ಒಂದು ಸಣ್ಣ ಕಬ್ಬಿಣದ ಟ್ಯಾಂಕ್ ಅಳವಡಿಸಲಾಗಿದೆ. ಅದಕ್ಕೆ ಪೈಪ್ ಜೋಡಿಸಿದ್ದು, ಒಂದೊಂದು ಸಸಿಗೆ ಒಂದೊಂದು ಪಾಯಿಂಟ್ ತೆರೆಯಲಾಗಿದೆ. ಹನಿ ಹನಿ ನೀರು ಬೀಳುವಂತೆ ಮಾಡಲಾಗಿದೆ. ನೀರು ಖಾಲಿ ಆದ ಮೇಲೆ ಸಿಬ್ಬಂದಿಗಳು ಟ್ರ್ಯಾಕ್ಟರ್ ಮೂಲಕ ಟ್ಯಾಂಕ್‌ಗೆ ನೀರು ತುಂಬುತ್ತಿದ್ದಾರೆ. ಅಶೋಕ ವೃತ್ತದಿಂದ ಸಂಗೊಳ್ಳಿ ರಾಯಣ್ಣ ವೃತ್ತ, ರಾಣಿ ಚನ್ನಮ್ಮ ವೃತ್ತ, ಅಂಬೇಡ್ಕರ್ ರಸ್ತೆ, ಶ್ರೀಕೃಷ್ಣದೇವರಾಯ ವೃತ್ತ, ಕೆಎಲ್ಇ ರಸ್ತೆವರೆಗೆ. ಅದೇ ರೀತಿ ಚನ್ನಮ್ಮ ವೃತ್ತದಿಂದ ಲಿಂಗರಾಜ ದೇಸಾಯಿ ಕಾಲೇಜು ರಸ್ತೆ, ಸಂಭಾಜಿ ಮಹಾರಾಜ ವೃತ್ತ, ಗೋಗಟೆ ವೃತ್ತ, ಕಾಂಗ್ರೆಸ್ ರಸ್ತೆ ಸೇರಿದಂತೆ ನಗರದ ಸುಮಾರು 6.5 ಕಿ.ಮೀ. ಪ್ರದೇಶದ ರಸ್ತೆ ವಿಭಜಕಗಳಲ್ಲಿ ಸಸಿಗಳನ್ನು ನೆಡಲಾಗಿತ್ತು. ಪುಣೆ ಮತ್ತು ಕೊಲ್ಹಾಪುರದಿಂದ ತಂದಿದ್ದ ಬಬೂನ್ ವಿಲ್ಲಾ, ಜತ್ರಾಪ್, ಡಾಗ್ ಇಕ್ಸೋರಾ, ಕ್ರಿಸ್ಟೇನಾ, ಗೋಲ್ಡನ್ ಸೈಪ್ರಸ್, ಸೈಕಸ್ ಪಾಂಡಾ ತರಹದ 4500 ಅಲಂಕಾರಿಕ ಸಸಿಗಳನ್ನು ನೆಟ್ಟಿದ್ದರು. ಈಗ ಬಹುತೇಕ ಸಸಿಗಳು ಚಿಗುರೊಡೆದಿದ್ದು, ನಗರದ ಸೌಂದರ್ಯವನ್ನು ಹೆಚ್ಚಿಸುತ್ತಿವೆ.

ಆರಂಭದಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ನೀರು ಪೂರೈಕೆಗೆ ಬಳಸಲಾಗಿತ್ತು. ಅದು ಅಷ್ಟೊಂದು ಪರಿಣಾಮಕಾರಿ ಆಗದ ಹಿನ್ನೆಲೆಯಲ್ಲಿ ಹೊಸ ಉಪಾಯ ಕಂಡುಕೊಂಡ ಪಾಲಿಕೆ ಅಧಿಕಾರಿಗಳು ಹನಿ ನೀರಾವರಿ ಮೊರೆ ಹೋಗಿದ್ದಾರೆ. ಪಾಲಿಕೆ ಆರ್ಥಿಕತೆಗೆ ತೊಂದರೆ ಆಗದಂತೆ‌ ಸಿಎಸ್ ಆರ್ ಅನುದಾನದಿಂದ ಪೈಪ್ ಅಳವಡಿಸುವ ಕೆಲಸ ಆಗುತ್ತಿದೆ.

Edited By : Suman K
Kshetra Samachara

Kshetra Samachara

10/01/2025 12:41 pm

Cinque Terre

3.48 K

Cinque Terre

0

ಸಂಬಂಧಿತ ಸುದ್ದಿ