ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಥಣಿ: ರಾಯಣ್ಣ ಜ್ಯೋತಿಗೆ ಸ್ವಾಗತಿಕೊಳ್ಳಲು ಬಾರದ ಅಧಿಕಾರಿಗಳು, ಕರವೇ ಆಕ್ರೋಶ

ಅಥಣಿ:- ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಜ್ಯೋತಿಗೆ ಸ್ವಾಗತಿಸಿಕೊಳ್ಳಲು ಬಾರದ ಅಧಿಕಾರಿಗಳ ವಿರುದ್ಧ ಕರವೇ ಸಂಘಟನೆ ಗರಂ ಆಗಿದೆ.

ಜನವರಿ 26 ರಂದು ನಂದಗಡದಲ್ಲಿ ನಡೆಯಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವಕ್ಕೆ ಈಗಾಗಲೇ ರಾಜ್ಯಾದ್ಯಂತ ರಾಯಣ್ಣ ಉತ್ಸವ ಜ್ಯೋತಿ ಮೆರವಣಿಗೆ ನಡೆಯುತ್ತಿದೆ. ಅದರಂತೆ ಇಂದು ಬೆಳಿಗ್ಗೆ ಅಥಣಿ ಪಟ್ಟಣದಲ್ಲಿ ಸಂಗೊಳ್ಳಿ ರಾಯಣ್ಣ ಉತ್ಸವ ಜ್ಯೋತಿಗೆ ಸ್ವಾಗತ ಮಾಡಿಕೊಳ್ಳಲು ಅಧಿಕಾರಿಗಳು ಬಾರದೆ ಮೌನವಾಗಿದ್ದು, ರಾಯಣ್ಣ ಉತ್ಸವ ಜ್ಯೋತಿ ಮೆರವಣಿಗೆ ಮಾಡಲು ಹೊರಟಿದ್ದು, ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡ ಕರವೇ ಸಂಘಟನೆಯವರು ಅಥಣಿ ತಾಲೂಕು ಆಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಸಂಗೊಳ್ಳಿ ರಾಯಣ್ಣ ಉತ್ಸವಕ್ಕೆ ಅಧಿಕಾರಿಗಳು ಯಾಕೆ ಬರಲಿಲ್ಲ? ಸಂಗೊಳ್ಳಿ ರಾಯಣ್ಣನಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ತಾಲೂಕಾಡಳಿತದ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶವನ್ನ ಹೊರಹಾಕಿದ್ದಾರೆ.

Edited By : Vinayak Patil
PublicNext

PublicNext

10/01/2025 01:54 pm

Cinque Terre

14.94 K

Cinque Terre

0

ಸಂಬಂಧಿತ ಸುದ್ದಿ