ಅಥಣಿ: ಬಸ್ ಟಿಕೆಟ್ ದರ ಹೆಚ್ಚಳದ ಬಗ್ಗೆ ಮಾತನಾಡಿದ ಅಥಣಿ ಶಾಸಕ ಲಕ್ಷ್ಮಣ ಸವದಿ, ಕೇಂದ್ರ ಟ್ಯಾಕ್ಸ್ ಕಡಿಮೆ ಮಾಡಲಿ ಎಂದು ಕೇಂದ್ರದ ಕಡೆಗೆ ಬೊಟ್ಟು ಮಾಡಿದ್ದಾರೆ.
ಅಥಣಿ ಪಟ್ಟಣದ ಭೂ ಸುರಕ್ಷಾ ಯೋಜನೆ ಅಡಿಯಲ್ಲಿ ಅಭಿಲೇಖಾಲಯದ ಶಾಖೆಗಳ ಗಣಕೀಕರ ಯಂತ್ರಗಳ ಉದ್ಘಾಟನೆ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅವರು ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ನಾನು ಬಿಜೆಪಿ ಸರ್ಕಾರದ ಕಾಲಾವಧಿಯಲ್ಲಿ ಬಸ್ ಟಿಕೆಟ್ ದರ ಹೆಚ್ಚಳ ಮಾಡಿದ್ದೆ. ಈಗಲೂ ಸಾರಿಗೆ ವ್ಯವಸ್ಥೆಯ ಆರ್ಥಿಕ ಚಿಂತನೆಯಿಂದ ಈಗ ಸರ್ಕಾರ ಕೇವಲ 15% ಟಿಕೆಟ್ ದರ ಹೆಚ್ಚಳ ಮಾಡಿದೆ.
ಕೇಂದ್ರ ಸರ್ಕಾರ ಡಿಸೇಲ್, ಬಸ್ ಟೈಯರ್ ಹಾಗೂ ಸಾರಿಗೆ ಟೋಲ್ ಗಳ ಮೇಲಿನ ಸುಂಕಗಳನ್ನು ಕಡಿತ ಮಾಡಲಿ ನಾವು ಬಸ್ ಟಿಕೆಟ್ ದರ ಕಡಿಮೆ ಮಾಡುತ್ತೇವೆ ಎಂದು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಟೀಕಾಪ್ರಹಾರ ಮಾಡಿದರು.
PublicNext
10/01/2025 05:24 pm