ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಥಣಿ : ಶತಮಾನ ಕಂಡ ಬ್ಯಾಂಕ್ ಗೆ 40 ವರ್ಷದ ಬಳಿಕ ಚುನಾವಣೆ

ಅಥಣಿ : ಪ್ರಜಾಪ್ರಭುತ್ವ ವೆವಸ್ತೆಯಲ್ಲಿ ಚುನಾವಣೆ ಅಂದ್ರೆ ಆಯಾ ಕಾಲಘಟ್ಟಕ್ಕನುಗುಣವಾಗಿ ಬರಬಹುದಾದ ಪ್ರತಿ ಪ್ರಮುಖವಾದ ಅಧಿಕಾರದ ಕೇಂದ್ರೀಕೃತ ವ್ಯವಸ್ಥೆ, ಸಾಮಾಜಿಕ ಹಾಗೂ ರಾಜಕೀಯವಾಗಿ 1,2,3,ಅಥವಾ 5 ವರ್ಷಕ್ಕೊಮ್ಮೆ ಚುನಾವಣೆ ನೊಡಿದ್ದೇವೆ ಮತ್ತು ಕೇಳಿದ್ದೇವೆ ಆದ್ರೆ 40 ವರ್ಷದ ಬಳಿಕ ಚುನಾವಣೆ ನಡೆಯುತ್ತಿದ್ದು ಎಲ್ಲರ ಗಮನ ಸೆಳೆದಿದೆ.

ಅದು ಗಡಿ ಜಿಲ್ಲೆ ಅಥಣಿ ಪಟ್ಟಣದಲ್ಲಿ ಸರಿಸುಮಾರು ಶತಮಾನ ಕಂಡ ಶ್ರೀ ಶಿವಯೋಗಿ ಮುರುಘೇಂದ್ರ ಬ್ಯಾಂಕ್ ಸುಮಾರು 5000 ಕ್ಕೂ ಅಧಿಕ ಸದ್ಯಸ್ಯತ್ವ ಒಳಗೊಂಡಿದ್ದು, ಸುಮಾರು 40 ವರ್ಷದವರೆಗೂ ಆಡಳಿತ ಮಂಡಳಿ ಬದಲಾವಣೆ ಹಾಗೂ ಚುನಾವಣೆ ನಡೆದಿಲ್ಲ ಆದ್ರೆ ಈ ವರ್ಷ ಬ್ಯಾಂಕ್ ಆಡಳಿತ ಮಂಡಳಿ ಬದಲಾವಣೆಗೆ ತೀರ್ಮಾನ ನಡೆದಿದ್ದು ಚುನಾವಣೆ ಪ್ರಕ್ರಿಯೆ ನಡೆಯುತ್ತಿರುವುದು ವಿಶೇಷವಾಗಿದೆ.

ಚುನಾವಣೆ ಘೋಷಣೆಯಾದ ದಿನದಿಂದ ಹಿಡಿದು ಇಲ್ಲಿಯವರೆಗೆ ಎರಡೂ ಬಣಗಳ ಸದಸ್ಯರು ಬ್ಯಾಂಕಿನ ಸದಸ್ಯರ ಮನೆ ಮನೆಗೆ ತೆರಳಿ ಬ್ಯಾಂಕಿನ ಅಭಿವೃದ್ದಿಯ ವಿಷಯಗಳನ್ನು ಮುಂದೆ ಇಟ್ಟು ಮತಕೇಳಲು ಆರಂಭಿಸಿದ್ದಾರೆ.

ಏನೆ ಆಗಲಿ ಶತಮಾನ ಕಂಡ ಬ್ಯಾಂಕಿನಲ್ಲಿ ಚುನಾವಣೆ ನಡೆಯುತ್ತಿರುವುದು ಅಥಣಿ ತಾಲೂಕಿನ ಸಮಸ್ತರಿಗೂ ಕೂಡ ಕುತೂಹಲ ಉಂಟು ಮಾಡಿದೆ ಎಂದರೆ ತಪ್ಪಾಗಲಾರದು.

Edited By : PublicNext Desk
Kshetra Samachara

Kshetra Samachara

10/01/2025 05:39 pm

Cinque Terre

2.14 K

Cinque Terre

0

ಸಂಬಂಧಿತ ಸುದ್ದಿ