ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ-2025 ವೀರ ಜ್ಯೋತಿಗೆ ಅದ್ಧೂರಿ ಸ್ವಾಗತ

ಬೆಳಗಾವಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ-2025 ಪ್ರಯುಕ್ತ ಇಂದು ಖಾನಾಪುರ ತಾಲೂಕಿನ ನಂದಗಡದಿಂದ ಪ್ರಾರಂಭವಾದ ವೀರ ಜ್ಯೋತಿ ಯಾತ್ರೆಯು ಬೆಳಗಾವಿ ನಗರಕ್ಕೆ ಆಗಮಿಸಿತು. 

ನಗರದ ಚನ್ನಮ್ಮ ವೃತ್ತಕ್ಕೆ ಆಗಮಿಸಿದ ವೀರ ಜ್ಯೋತಿಗೆ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಶುಭಾ ಬಿ ಅವರು ಸ್ವಾಗತಿಸಿ ವೀರಜ್ಯೋತಿಗ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಮರ್ಪಿಸಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಉಪ ಆಯುಕ್ತ ಉದಯಕುಮಾರ ತಳವಾರ, ಬೆಳಗಾವಿ ತಹಶೀಲ್ದಾರ ಬಸವರಾಜ ನಾಗರಾಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಸೇರಿದಂತೆ ಗಣ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.

ಜನವರಿ 12 ಹಾಗೂ 13 ರಂದು ಜರುಗಲಿರುವ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಉತ್ಸವದ ನಿಮಿತ್ಯ ವೀರ ಜ್ಯೋತಿಯು ಜಿಲ್ಲಾದ್ಯಂತ ಸಂಚರಿಸಿ ಜನವರಿ 12 ರಂದು ಸಂಗೊಳ್ಳಿ ಗ್ರಾಮಕ್ಕೆ ಆಗಮಿಸುವುದು.

 

Edited By : PublicNext Desk
Kshetra Samachara

Kshetra Samachara

08/01/2025 05:55 pm

Cinque Terre

4.12 K

Cinque Terre

0

ಸಂಬಂಧಿತ ಸುದ್ದಿ