ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: "ಇಕ್ಷುಪೆಕ್ಸ್‌–2025" ಜಿಲ್ಲಾಮಟ್ಟದ ಅಂಚೆ ಚೀಟಿಗಳ ಪ್ರದರ್ಶನ

ಬೆಳಗಾವಿ: ಬೆಳಗಾವಿ ನಗರದ ಮಹಾವೀರ ಭವನದಲ್ಲಿ ಅಂಚೆ ಇಲಾಖೆ, ಅಂಚೆ ಚೀಟಿ ಮತ್ತು ನಾಣ್ಯ ಸಂಗ್ರಹಗಳ ಗ್ರೂಪ್ ಸಹಯೋಗದೊಂದಿಗೆ ಇಂದು ‘ಇಕ್ಷುಪೆಕ್ಸ್‌–2025’ ಜಿಲ್ಲಾಮಟ್ಟದ ಅಂಚೆ ಚೀಟಿಗಳ ಪ್ರದರ್ಶನದ ಹಮ್ಮಿಕೊಳ್ಳಲಾಗಿತ್ತು.

2013ರಲ್ಲಿ ಬೆಳಗಾವಿಯಲ್ಲಿ ಅಂಚೆ ಚೀಟಿ ಪ್ರದರ್ಶನ ನಡೆದಿತ್ತು. ಯುವಜನರಿಗೆ ಅಂಚೆ ಚೀಟಿಗಳ ಮಹತ್ವ ತಿಳಿಸುವುದಕ್ಕಾಗಿ, 12 ವರ್ಷಗಳ ನಂತರ ಮತ್ತೆ ಆಯೋಜಿಸಲಾಗಿದೆ. ವಿವಿಧ ರಾಜ್ಯಗಳ ಅಂಚೆ ಚೀಟಿ ಸಂಗ್ರಹಕಾರರು ಸಂಗ್ರಹಿಸಿರುವ ದೇಶ–ವಿದೇಶದ ಅಪರೂಪದ ಅಂಚೆ ಚೀಟಿಗಳನ್ನು 180 ಫ್ರೇಮ್‌ಗಳಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

ಇದೇ ವೇಳೆ ಸತೀಶ ಶುಗರ್ಸ್‌ ಲಿಮಿಟೆಡ್‌ನ ರಜತ ಮಹೋತ್ಸವದ ವಿಶೇಷ ಅಂಚೆ ಲಕೋಟೆ, ಗೋಕಾಕ ಜಲಪಾತದ ಶಾಶ್ವತ ಚಿತ್ರಾತ್ಮಕ ಅಂಚೆ ಮುದ್ರೆ, ಸಾಗಾ ಆಫ್‌ ಬುದ್ಧಿಸಂತೆ ಕೃತಿ ಬಿಡುಗಡೆ ಮತ್ತು ಭಾರತದ ಸ್ಥಳೀಯ ಬುಡಕಟ್ಟು ಕುರಿತಾದ ಪೋಸ್ಟ್‌ ಕಾರ್ಡ್‌ಗಳನ್ನು ಬಿಡುಗಡೆಗೊಳಿಸಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ್, ಅಂಚೆ ಇಲಾಖೆಯ ಉತ್ತರ ಕರ್ನಾಟಕ ವಲಯದ ಪೋಸ್ಟ್‌ ಮಾಸ್ಟರ್‌ ಜನರಲ್‌ ಕರ್ನಲ್‌ ಸುಶೀಲ್‌ ಕುಮಾರ, ಉತ್ತರ ಕರ್ನಾಟಕ ವಲಯದ ನಿರ್ದೇಶಕಿ ವಿ.ತಾರಾ, ಬೆಳಗಾವಿ ವಿಭಾಗದ ಅಂಚೆ ಅಧೀಕ್ಷಕ ವಿಜಯ ವಾದೋನಿ, ಚಿಕ್ಕೋಡಿ ವಿಭಾಗದ ಅಂಚೆ ಅಧೀಕ್ಷಕ ವೆಂಕಟೇಶ ಬಾದಾಮಿ, ಅಂಚೆ ಚೀಟಿ ಸಂಗ್ರಹಕಾರ್ತಿ ಎನ್‌.ಶ್ರೀದೇವಿ, ಬೆಳಗಾವಿ, ಚಿಕ್ಕೋಡಿ ಮತ್ತು ಗೋಕಾಕ್ ಅಂಚೆ ವಿಭಾಗದ ಅಧಿಕಾರಿಗಳು ಹಾಜರಿದ್ದರು.

Edited By : Manjunath H D
PublicNext

PublicNext

08/01/2025 05:41 pm

Cinque Terre

28.91 K

Cinque Terre

0

ಸಂಬಂಧಿತ ಸುದ್ದಿ