ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಗವಾಡ: ರಾಜು ಕಾಗೆ ಅಸಮರ್ಥ ನಾಯಕ - ಶ್ರೀಮಂತ ಪಾಟೀಲ ವ್ಯಂಗ್ಯ

ಕಾಗವಾಡ: ಬಸವೇಶ್ವರ ಏತ್ ನೀರಾವರಿ ವಿಚಾರದಲ್ಲಿ ನೀರಾವರಿ ಯೋಜನೆಗೆ ಸಮರ್ಪಕ ಅನುದಾನ ತರವಲ್ಲಿ ಕ್ಷೇತ್ರ ಶಾಸಕರು ಅಸಮರ್ಥರು ಎಂದು ಮಾಜಿ ಸಚಿವ ಶ್ರೀಮಂತ ಪಾಟೀಲ ಅವರು ಶಾಸಕ ರಾಜು ಕಾಗೆ ಅವರಿಗೆ ಲೇವಡಿ ಮಾಡಿದ್ದಾರೆ.

ತಾಲೂಕಿನ ಕೆಂಪವಾಡ ಗ್ರಾಮದ ಸ್ವ ಕಚೇರಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ವಿಚಾರದಲ್ಲಿ ಸರ್ಕಾರ ಸ್ಪಂದಿಸುತ್ತಿಲ್ಲ, ನಾನು ನೂರು ಬಾರಿ ಮನವಿ ಮಾಡಿದರೂ ಸರ್ಕಾರ ಗಮನ ಹರಿಸುತ್ತಿಲ್ಲ ಎಂದು ಹಾಲಿ ಶಾಸಕ ರಾಜು ಕಾಗೆ ಅವರು ತಮ್ಮದೆ ಸರ್ಕಾರದ ವೈಫಲೆತೆಗಳ ಬಗ್ಗೆ ಮಾತನಾಡಿದ್ದರು. ಬಸವೇಶ್ವರ ಎತ ನೀರಾವರಿ ವಿಚಾರದಲ್ಲಿ ರಾಜಕೀಯ ಮಾಡುವುದು ಒಳಿತಲ್ಲ. ಈಗಾಗಲೆ 82% ಕಾಮಗಾರಿ ಪೂರ್ಣಗೊಂಡಿದ್ದು ಅಲ್ಪಮಟ್ಟಿಗೆ ಕೆಲಸ ಬಾಕಿ ಇದೆ. ಆದರೆ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿದೆ ಹಾಗೂ ಅನುದಾನ ತರುವ ವಿಚಾರದಲ್ಲಿ ಕ್ಷೇತ್ರ ಶಾಸಕರು ಅಸಮರ್ಥರು ಎಂದು ವ್ಯಂಗ್ಯವಾಡಿದರು.

Edited By : Manjunath H D
PublicNext

PublicNext

08/01/2025 07:19 pm

Cinque Terre

38.01 K

Cinque Terre

0

ಸಂಬಂಧಿತ ಸುದ್ದಿ