ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಜೈ ಮಹಾರಾಷ್ಟ್ರ ಘೋಷಣೆ, ಪಾಲಿಕೆ ವಿಸರ್ಜನೆಗೆ ಕರವೇ ಒತ್ತಾಯ

ಬೆಳಗಾವಿ: ಬೆಳಗಾವಿಯ ಅನಗೋಳದಲ್ಲಿ ಛತ್ರಪತಿ ಸಂಬಾಜೀ ಮಹಾರಾಜರ ಪ್ರತಿಮೆ ಅನಾವರಣದ ವೇಳೆ ಮಹಾರಾಷ್ಟ್ರ ಸಚಿವ ನಾಡದ್ರೋಹಿ ಘೋಷಣೆ ಕೂಗಿ ಕನ್ನಡಿಗರ ಭಾವನೆಗೆ ಧಕ್ಕೆ ತಂದಿದ್ದಾರೆ.‌ ಅವರ ವಿರುದ್ಧ ಮತ್ತು ಕಾರ್ಯಕ್ರಮ ಆಯೋಜಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಮನವಿ ಸಲ್ಲಿಸಲಾಯಿತು.

ಇಂದು ಬೆಳಗಾವಿಯ ಪೊಲೀಸ್ ಆಯುಕ್ತರ ಕಚೇರಿಗೆ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು. ಈ ವೇಳೆ ಕನ್ನಡಿಗರ ತೆರಿಗೆ ಹಣದಿಂದ ಪ್ರತಿಮೆ ಅನಾವರಣ ಮಾಡಿ, ಮಹಾರಾಷ್ಟ್ರದ ಸಚಿವರನ್ನು ಕರೆಸಿ ಜೈ ಮಹಾರಾಷ್ಟ್ರ ಎಂಬ ಘೋಷಣೆ ಕೂಗಿ ಕನ್ನಡಿಗರ ಭಾವನೆಗೆ ಧಕ್ಕೆ ತರುವ ಕೆಲಸ ಮಾಡಲಾಗಿದೆ. ಈ ಕಾರ್ಯಕ್ರಮದ ಆಯೋಜಕರಾಗಿದ್ದ ಬೆಳಗಾವಿ ದಕ್ಷಿಣ ಮತ ಕ್ಷೇತ್ರದ ಶಾಸಕ ಅಭಯ್ ಪಾಟೀಲ್, ಮೇಯರ್, ಉಪ ಮೇಯರ್ ಹಾಗೂ ಕೆಲ ನಗರ ಸೇವಕರನ್ನು ಅಮಾನತ್ತು ಮಾಡಬೇಕು. ಅವರ ಮೇಲೆ ರಾಜ್ಯ ದ್ರೋಹದ ಪ್ರಕರಣ ದಾಖಲಿಸಿಕೊಂಡು ಶಿಸ್ತು ಕ್ರಮ ಕೈಗೊಳ್ಳಬೇಕು. ಈ ಘಟನೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಮಹಾನಗರ ಪಾಲಿಕೆಯನ್ನು ವಿಸರ್ಜನೆ ಮಾಡಬೇಕು ಎಂದು ಒತ್ತಾಯಿಸಿದರು.

Edited By : Suman K
PublicNext

PublicNext

08/01/2025 03:03 pm

Cinque Terre

18.89 K

Cinque Terre

0

ಸಂಬಂಧಿತ ಸುದ್ದಿ