ಬೆಂಗಳೂರು: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಿ ದೂರು ನೀಡಿದ್ದ ವಿಧಾನಸಭಾ ಪರಿಷತ್ ಸದಸ್ಯ ಸಿ.ಟಿ ರವಿ ಸಿಐಡಿ ಮುಂದೆ ಹಾಜರಾದರು.
ಮೇಲ್ಮನೆ ಸದಸ್ಯರಾದ ಎಸ್.ವಿ.ಸಂಕನೂರ್ ಹಾಗೂ ಡಿ.ಎಸ್.ಅರುಣ್ ಅವರು ಸಿ.ಟಿ.ರವಿಗೆ ಜೀವ ಬೆದರಿಕೆ ಹಾಕಿರುವ ಸಂಬಂಧ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ದೂರು ನೀಡಿದ್ದರು. ಸಭಾಪತಿ ಕಾರ್ಯದರ್ಶಿ ಮುಖೇನ ಪ್ರಕರಣ ದಾಖಲಿಸುವಂತೆ ಹಿರೇಬಾಗೆವಾಡಿ ಪೊಲೀಸರು ಸೂಚಿಸಿದ ಹಿನ್ನೆಲೆಯಲ್ಲಿ ಆರೋಪಿತರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಬೆಳಗಾವಿಯ ಹಿರೇಬಾಗೆವಾಡಿ ದಾಖಲಾಗಿದ್ದ ಪ್ರಕರಣವು ಹಸ್ತಾಂತರವಾಗಿ ಸಿಐಡಿ ತನಿಖೆ ನಡೆಸುತ್ತಿದ್ದು, ಈ ಸಂಬಂಧ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಜ.6ರಂದು ಗೈರಾದ ಹಿನ್ನೆಲೆಯಲ್ಲಿ ಇಂದು ವಿಚಾರಣೆ ಬರುವಂತೆ ನೋಟಿಸ್ ಜಾರಿ ಮಾಡಲಾಗಿತ್ತು. ಈ ಸಂಬಂಧ ಸಿ.ಟಿ.ರವಿ ಅವರು ತನಿಖಾಧಿಕಾರಿ ಕೇಶವಮೂರ್ತಿ ಮುಂದೆ ಹಾಜರಾಗಿ 1 ಗಂಟೆಗಳ ಕಾಲ ವಿಚಾರಣೆ ಎದುರಿಸಿದರು.
ವಿಚಾರಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿ.ಟಿ. ರವಿ. ಚಳಿಗಾಲ ಅಧಿವೇಶನದ ಕೊನೆ ದಿನವಾಗಿದ್ದ ಡಿ.19ರಂದು ಸುವರ್ಣಸೌಧದ ಪಶ್ಚಿಮ ದ್ವಾರದ ಬಳಿ ಹಲ್ಲೆಗೆ ಯತ್ನಿಸಿದ್ದರು. ಅಂದು ಸಂಜೆ ವಿಧಾನಸಭೆ ವಿಪಕ್ಷ ನಾಯಕರೊಂದಿಗೆ ಚರ್ಚೆ ನಡೆಸಿ ಪರಿಷತ್ ಕಡೆ ಬರುವ ಮೊಗಸಾಲೆ ಬಳಿ ಹಲ್ಲೆಗೆ ಯತ್ನಿಸಿದರು.
ಈ ಬಗ್ಗೆ ಪ್ರಕರಣ ದಾಖಲಾಗಿತ್ತು.ಈ ಸಂಬಂಧ ಸಿಐಡಿ ಅಧಿಕಾರಿಗಳ ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಿದ್ದೇನೆ ಎಂದರು.
ವಿಚಾರಣೆ ವೇಳೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪಿಎ ಚನ್ನರಾಜ್ ಹಟ್ಟಿ ಸೇರಿ ಇಬ್ಬರ ಹೆಸರು ಹೇಳಿದ್ದೇನೆ. ಹಲ್ಲೆ ನಡೆಸಿದರು ಯಾರು ? ಯಾರೆಲ್ಲಾ ಇದ್ದು ಘೋಷಣೆ ಕೂಗಿದವರ ಬಗ್ಗೆ ಮಾಹಿತಿ ನೀಡಿದ್ದೇನೆ. ಸಿಸಿ ಕ್ಯಾಮೆರದಲ್ಲಿ ಸೆರೆಯಾಗಿರುವ ದೃಶ್ಯ ತೋರಿಸಿದರೆ ಗುರುತಿಸುವುದಾಗಿ ಹೇಳಿದ್ದೇನೆ ಎಂದರು. ಅಕ್ಷೇಪಾರ್ಹ ಹೇಳಿಕೆ ಪ್ರಕರಣ ಸಂಬಂಧ ವಿಧಾನಪರಿಷತ್‌ನಲ್ಲಿ ಕೃತ್ಯ ನಡೆದಿದೆ ಎಂದು ಸಚಿವೆ ಲಕ್ಷ್ಮೀ ಹೆಬಾಳ್ಕರ್ ದೂರು ನೀಡಿದ್ದಾರೆ.
ಆದರೆ ವಿಧಾನಪರಿಷತ್ ನಲ್ಲಿ ಅಧಿಕಾರ ಇರುವುದು ಸಭಾಪತಿಗಳಿಗೆ ಹೀಗಾಗಿ ಅವರು ಕ್ರಮ ಕೈಗೊಳ್ಳಲಿದ್ದಾರೆ. ನನ್ನ ಮೇಲೆ ಹಲ್ಲೆಯಾಗಿದೆ ಎಂದು ಖಾನಾಪುರ ಠಾಣೆಯಲ್ಲಿ ದೂರು ನೀಡಿದ್ದು 20 ದಿನವಾದರೂ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
PublicNext
09/01/2025 08:24 pm