ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಡೆದ ತ್ರಿಬಲ್ ಮರ್ಡರ್ ಪ್ರಕರಣವೊಂದು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಪತ್ನಿ, ಮಗಳು ಹಾಗೂ ಮತ್ತೋರ್ವ ಯುವತಿಯನ್ನು ಕೊಂದು ಆರೋಪಿ ಪೊಲೀಸ್ ಸ್ಟೇಷನ್‌ಗೆ ಬಂದು ಶರಣಾಗಿದ್ದಾನೆ. ಗಂಗರಾಜ್ ಎಂಬಾತನೇ ಮೂವರನ್ನು ಕೊಲೆಗೈದು ನಂತರ ಸರೆಂಡರ್ ಆಗಿದ್ದಾನೆ.
ಕೊಲೆಯಾದ ಭಾಗ್ಯಮ್ಮ ಮತ್ತು ಆರೋಪಿ ಗಂಗರಾಜು ಇಬ್ಬರಿಗೂ ಎರಡನೇ ಮದುವೆಯಾಗಿದ್ದು, ಮೊದಲ ಪತ್ನಿ ಹಾಗೂ ಮೊದಲ ಪತಿಯಿಂದ ಡಿವೋರ್ಸ್ ಪಡೆಯದೆ ಲಿವ್ ಇನ್ ರಿಲೇಷನ್ಶಿಪ್ ನಲ್ಲಿದ್ರು. ಭಾಗ್ಯಮ್ಮಗೆ ಮಗಳಿದ್ದ ವಿಚಾರ ತಿಳಿದಿದ್ರೂ ಸಹ ಸಹಜೀವನಕ್ಕೆ ಒಪ್ಪಿದ್ದ ಗಂಗರಾಜು ಭಾಗ್ಯಮ್ಮ ಸೇರಿ ಇಬ್ಬರು ಹೆಣ್ಣುಮಕ್ಕಳ ಮೇಲೂ ಸಾಕಷ್ಟು ಅನುಮಾನ ಪಡ್ತಿದ್ದ.
ಪತ್ನಿ ಜೊತೆ ಮಗಳಿಗೂ ಅಕ್ರಮ ಸಂಬಂಧವಿದೆ ಎಂದು ಅನುಮಾನ ಪಡ್ತಿದ್ದ ಮಲತಂದೆ. ಇದೇ ಕಾರಣಕ್ಕೆ ನಿನ್ನೆ ಗಲಾಟೆ ಮಾಡಿ ಕೊಲೆಗೆ ಸಂಚು ರೂಪಿಸಿದ್ದಾನೆ. ನಿನ್ನೆ ಗಲಾಟೆ ಬಳಿಕ ಹೆಸರಘಟ್ಟಕ್ಕೆ ಹೋಗಿದ್ದ ಆರೋಪಿ ರೈತರ ಸಂತೆಯಲ್ಲಿ 500 ರೂ ಕೊಟ್ಟು ಮಚ್ಚು ಖರೀದಿಸಿ, ಮೂವರನ್ನ ಕೊಲೆ ಮಾಡಿ ಶರಣಾಗತಿಗೆ ಪ್ಲಾನ್ ಮಾಡಿದ್ದ. ಪತ್ನಿ ಮನೆಯಲ್ಲಿದ್ದನ್ನ ಮೊದಲೇ ತಿಳಿದು ಒಬ್ಬೊಬ್ಬರನ್ನೇ ಕೊಲೆ ಮಾಡಲು ಪ್ಲಾನ್ ಮಾಡಿದ್ದ ಗಂಗರಾಜು.
ಬಳಿಕ ನೇರವಾಗಿ ಮನೆಗೆ ಬರ್ತಿದ್ದಂತೆ ಮತ್ತೆ ಗಲಾಟೆ ತೆಗೆದು ಮಗಳಾದ ನವ್ಯಾಳ ಕತ್ತಿಗೆ ಮಚ್ಚು ಬೀಸಿದ್ದ. ಇದೇ ವೇಳೆ ಅಡ್ಡ ಬಂದಿದ್ದ ಸಂಬಂಧಿ ಹೇಮಾವತಿಯ ಮೇಲೂ ಮಚ್ಚು ಬೀಸಿ ಇಬ್ಬರ ರುಂಡ ಮುಂಡ ಬೇರ್ಪಡಿಸಿ,ಕೊಂದು ಪತ್ನಿಗಾಗಿ ಮುಖ್ಯದ್ವಾರದ ಹಿಂದೆ ಕಾದಿದ್ದ. ಪತ್ನಿ ಮನೆಗೆ ಬಂದು ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಕ್ಕಳ ಮೃತದೇಹಗಳನ್ನ ನೋಡಿ ಕಿರುಚಾಡುತ್ತಿದ್ದಂತೆ, ಪತ್ನಿಯ ಮೇಲೂ ಸಿನಿಮೀಯ ಶೈಲಿಯಲ್ಲಿ ಅಟ್ಯಾಕ್ ಮಾಡಿ ಕ್ರೂರವಾಗಿ ಹತ್ಯೆ ಮಾಡಿದ್ದಾನೆ.
ಪತ್ನಿ ಭಾಗ್ಯಮ್ಮ 38, ಮಗಳು ನವ್ಯ19, ಮತ್ತು ಭಾಗ್ಯ ಅಕ್ಕನ ಮಗಳು ಹೇಮಾವತಿ 22 ಮೂವರನ್ನು ಕೊಲೆ ಮಾಡಿ ಮಚ್ಚ ಹಿಡಿದೇ ನೇರವಾಗಿ ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಸರೆಂಡರ್ ಆಗಿದ್ದಾನೆ ಎನ್ನಲಾಗಿದೆ. ಸದ್ಯ ಪೀಣ್ಯಾ ಪೊಲೀಸ್ರು ಹೆಚ್ಚಿನ ವಿಚಾರಣೆ ನೆಡೆಸುತ್ತಿದ್ದಾರೆ.
PublicNext
09/01/2025 01:58 pm