ಬೆಂಗಳೂರು: ತಿರುಪತಿಯಲ್ಲಿ ಕಾಲ್ತುಳಿತ ದುರಂತವನ್ನು ಶ್ರೀರಾಮ್ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಖಂಡಿಸಿದ್ದಾರೆ.
ಆಂಧ್ರಪ್ರದೇಶದ ತಿರುಪತಿ ತಿಮ್ಮಪ್ಪನ ಸನ್ನಿಧಿ ಜಗತ್ಪ್ರಸಿದ್ಧಿ ಆಗಿದೆ. ಲಕ್ಷಾಂತರ ಜನರು ಪ್ರತಿನಿತ್ಯ ದರ್ಶನಕ್ಕೆ ಬರುತ್ತಾರೆ. ನಿನ್ನೆ ನಡೆದ ಘಟನೆ ಅತ್ಯಂತ ಖಂಡನೀಯ ದುರದೃಷ್ಟಕರವಾದದ್ದು, ಇದನ್ನು ನಾನು ಖಂಡಿಸುತ್ತೇನೆ. ಹಿಂದೆ ಒಮ್ಮೆಯೂ ಈ ರೀತಿ ನೂಕುನುಗ್ಗಲು ಆಗಿರಲಿಲ್ಲ. ಈ ಹಿಂದೆ ಸಾವು ನೋವು ಆಗಿಲ್ಲ. ಈಗ ಆಗಿರುವುದು ಇದು ಸಂಶಯಾಸ್ಪದ ಆಗಿದೆ. ಇದರ ಹಿಂದೆ ಹಿಂದಿನ ಸರ್ಕಾರದ ಜಗನ್ ಕೈವಾಡ ಇದೆ ಎಂದು ಸಂಶಯ ಬರುತ್ತಿದೆ. ನಾನು ಇಂದಿನ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರಿಗೆ ವಿನಂತಿ ಮಾಡಿಕೊಳ್ಳುತ್ತೇನೆ. ಈ ಘಟನೆ ಬಗ್ಗೆ ಸಮಗ್ರವಾಗಿ ತನಿಖೆ ಆಗಬೇಕು. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಶಿಕ್ಷೆ ಆಗಬೇಕು. ಜೊತೆಗೆ ಆರು ಜನ ಭಕ್ತರು ಸಾವನ್ನಪ್ಪಿದ್ದಾರೆ. ಅವರಿಗೆ ಐವತ್ತು ಲಕ್ಷ ರೂಪಾಯಿ ಪರಿಹಾರ ಕೊಡಬೇಕು. ಐದು ವರ್ಷ ಆಡಳಿತ ಮಾಡಿದ ಜಗನ್ ಇವರು ಆ ಟಿಟಿಡಿಯಲ್ಲಿ ಬಹಳ ವ್ಯಕ್ತಿಗಳನ್ನು ಸೇರಿಸಿದ್ದಾರೆ. ಅವರು ಯಾರ್ಯಾರು ಇದಾರೆ ಮತ್ತು ಆಡಳಿತ ಮಂಡಳಿಯ ಬೇಜವಾಬ್ದಾರಿ ಇಂದ ಆಗಿರುವ ಈ ಘಟನೆ ಬಗ್ಗೆ ತನಿಖೆ ಆಗಿ ಯಾರ್ಯಾರು ತಪ್ಪಿತಸ್ಥರು ಇದಾರೋ ಅವರ ಮೇಲೆ ಈ ಆಡಳಿತ ಮಂಡಳಿ ಇಂದ ಕಿತ್ತಾಕಬೇಕು ಎಂದು ಶ್ರೀರಾಮ್ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
PublicNext
09/01/2025 08:51 pm