ಬೆಂಗಳೂರು : 6 ನಕ್ಸಲರು ಸಿಎಂ ಸಿದ್ದರಾಮಯ್ಯ ಮುಂದೆ ಶರಣಾದ ವಿಚಾರಕ್ಕೆ ಬಿಜೆಪಿ ಆಕ್ಷೇಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಪರಮೇಶ್ವರ್, ನಕ್ಸಲರು ಸಿಎಂ ಮುಂದೆ ಶರಣಾದರೆ ಅದ್ರಲ್ಲಿ ತಪ್ಪೇನಿದೆ,ಯಾಕೆ ತಪ್ಪು ಅಂತ ಹೇಳಬೇಕಲ್ವಾ.?
ಇಡೀ ದೇಶಕ್ಕೆ ಗೊತ್ತಾಗಬೇಕು. ನಕ್ಸಲ್‌ಗೆ ಹೋಗಬಾರದು ಅಂತ ಒಂದು ಸಂದೇಶ ಕೊಡಲು ಹೀಗೆ ಮಾಡಿದ್ದೇವೆ ಎಂದು ಸ್ಪಷ್ಟನೆ ನೀಡಿದರು. ಇನ್ನೂ ಬಿಜೆಪಿ ಶಾಸಕ ಸುನಿಲ್ ಕುಮಾರ್ ಆಕ್ಷೇಪಕ್ಕೆ ತಿರುಗೇಟು ನೀಡಿದ ಪರಮೇಶ್ವರ್, ಸುನಿಲ್ ಕುಮಾರ್ ಕ್ಷೇತ್ರದಲ್ಲೇ ನಕ್ಸಲ್ ಹೆಚ್ಚಿಗಿದ್ರು ಅಲ್ವಾ, ANF ಅವರ ಕ್ಷೇತ್ರದಲ್ಲೇ ಇದೆ ಅಲ್ವಾ ಎಂದರು. ಶರಣಾದ ನಕ್ಸಲರು ಬಂದಾಗ ಅವರ ಬಳಿ ಯಾವುದೇ ಶಸ್ತ್ರಾಸ್ತ್ರ ಇರಲಿಲ್ಲ. ಎಲ್ಲಿ ಬಿಟ್ಟು ಬಂದಿದ್ದಾರೆ ಎಲ್ಲಿ ಬಿಸಾಕಿದ್ದಾರೆ ಅನ್ನೋದನ್ನ ಪೊಲೀಸರು ಪರಿಶೀಲನೆ ಮಾಡ್ತಾರೆ. 6 ನಕ್ಸಲರು ಶರಣಾಗಿದ್ದರಿಂದ ಬಹುತೇಕ ರಾಜ್ಯದಲ್ಲಿ 99% ನಕ್ಸಲ್ ಅಧ್ಯಾಯ ಮುಗಿದಿದೆ ಎಂದು ತಿಳಿಸಿದರು.
PublicNext
09/01/2025 01:34 pm