ಬೆಂಗಳೂರು: ವಿಜಯೇಂದ್ರ ಒಬ್ಬ ಹುಟ್ಟು ಹೋರಾಟಗಾರ ಅವರನ್ನು ತುಂಬಾ ವರ್ಷಗಳಿಂದಲೂ ಹತ್ತಿರದಿಂದ ನೋಡಿದ್ದೇನೆ. ಉಪಚುನಾವಣೆಯಲ್ಲಿ ಎಲ್ಲೆಲ್ಲಿ ಜವಾಬ್ದಾರಿ ಕೊಟ್ಟಿದ್ದಾರೆ ಅಲ್ಲೆಲ್ಲ ಗೆಲ್ಲಿಸಿಕೊಂಡು ಬಂದಿದ್ದಾರೆ ಎಂದು ವಿಧಾನಸೌಧದಲ್ಲಿ ಎಸ್.ಟಿ.ಸೋಮಶೇಖರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪರವಾಗಿ ಬ್ಯಾಟ್ ಬೀಸಿದ್ದಾರೆ.
ವಿಜಯೇಂದ್ರ ಎಲ್ಲೂ ದ್ವೇಷದ ರಾಜಕಾರಣ ಮಾಡಿರುವುದು ನಾನು ನೋಡಿಲ್ಲ. ಯಾರ ಮೇಲೂ ಎತ್ತಿ ಕಟ್ಟುವ ಮತ್ಸರ- ದ್ವೇಷದ ರಾಜಕಾರಣ ಮಾಡಿರುವುದನ್ನೂ ನೋಡಿಲ್ಲ. ಎಲ್ಲಾ ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಟ್ಟಿಗೆ ಹೋಗುವುದನ್ನು ನೋಡಿದ್ದೇನೆ. ಹೈಕಮಾಂಡ್ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದೆ. ಎಲ್ಲರೂ ಅವರಿಗೆ ಗೌರವ ಕೊಡುವ ಕೆಲಸ ಮಾಡಬೇಕು.
ಹೈಕಮಾಂಡ್ ನೇಮಕ ಮಾಡಿದ ಮೇಲೆ ವಿರೋಧ ಮಾಡುವ ಹಕ್ಕು ಯಾರಿಗೂ ಇಲ್ಲ. ಅಂತರಿಕವಾಗಿ ಆ ಬಗ್ಗೆ ಹೇಳುವ ಅವಕಾಶ ಇದೆ. ಆದರೆ, ಬಹಿರಂಗವಾಗಿ ಮಾಧ್ಯಮದವರ ಮುಂದೆ ಹೇಳುವ ಹಕ್ಕು ಯಾರಿಗೂ ಇಲ್ಲ. ಬಂಡಾಯ ನಾಯಕರಿಗೆ ಯಾರದ್ದು ಬೆಂಬಲ ಇದೆಯೋ ಇಲ್ಲವೋ ಗೊತ್ತಿಲ್ಲ. ಯಡಿಯೂರಪ್ಪ ಸಿಎಂ ಇದ್ದಾಗಲೂ ಇದೇ ರೀತಿ ವಿರೋಧ ಇತ್ತು. ಆಗ ಕಂಟ್ರೋಲ್ ಆಗಲಿಲ್ಲ. ಕಂಟ್ರೋಲ್ ಆಗದೇ ಇದ್ದರೆ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಕಷ್ಟ ಆಗಲಿದೆ ಎಂದು ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
PublicNext
09/01/2025 06:42 pm