ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಜಾತಿಗೊಂದು ಡಿನ್ನರ್ ಪಾಲಿಟಿಕ್ಸ್ ಶುರುವಾಗ್ತಿದೆ. ಈಗ ಲಿಂಗಾಯತ ಶಾಸಕರು ಪ್ರತ್ಯೇಕವಾಗಿ ಸಭೆ ಮಾಡ್ತಾರಾ ಎಂದೆಲ್ಲ ಚರ್ಚೆಗಳು ಶುರುವಾಗಿದ್ವು ಈ ಕುರಿತಂತೆ ಬೆಂಗಳೂರಿನಲ್ಲಿ ಸಚಿವ ಎಂ ಬಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ, ಲಿಂಗಾಯತ ಶಾಸಕರು ಯಾರೂ ಈ ಬಗ್ಗೆ ಚರ್ಚೆ ಮಾಡಿಲ್ಲ ,ಸಭೆ ಮಾಡುವ ಯಾವ ಪ್ರಶ್ನೆ ಕೂಡ ಉದ್ಭವ ಆಗಲ್ಲ. ನಾನಾಗಲಿ, ಖಂಡ್ರೆ ಆಗಲಿ ಯಾವುದೇ ಸಭೆ ಕರೆದಿಲ್ಲ ಎಂದು ಸ್ಪಷ್ಟ ಪಡಿಸಿದರು.
ಒಂದು ವೇಳೆ ನಾನು ಕರೆದ್ರೆ ಖಂಡ್ರೆಗೆ ಗೊತ್ತಾಗುತ್ತೆ, ಖಂಡ್ರೆ ಕರೆದ್ರೆ ನನಗೆ ಗೊತ್ತಾಗುತ್ತೆ. ಹೀಗಾಗಿ ನಾವು ಯಾರು ಯಾವ ಸಭೆಯನ್ನೂ ಕರೆದಿಲ್ಲ, ಮಾಡುತ್ತಿಲ್ಲ ಎಂದರು. ಅಲ್ದೇ ನನ್ನ ಪ್ರಕಾರ ಡಿನ್ನರ್ ಪಾಲಿಟಿಕ್ಸ್ ತಪ್ಪೇನಿಲ್ಲ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಯಾವ ಜಾತಿ ಸಂಘರ್ಷವೂ ಇಲ್ಲ, ಕಾಂಗ್ರೆಸ್ ಪಕ್ಷ ಎಲ್ಲಾ ಜಾತಿ, ಧರ್ಮದ ಮೇಲೆ ವಿಶ್ವಾಸ ಇಟ್ಟು ಕೆಲಸ ಮಾಡ್ತಿದೆ.ಅಂಬೇಡ್ಕರ್ ಸಿದ್ಧಾಂತದ ಮೇಲೆ ಕೆಲಸ ಮಾಡ್ತಿದೆ. ಮೇಲ್ವರ್ಗ, ಕೆಳವರ್ಗ ಅಂತಿಲ್ಲ. ಹಾಗಾಗಿ ಅನುಭವ ಮಂಟಪ ಸ್ಥಾಪನೆ ಮಾಡಿದ್ದು ಎಂದು ತಿಳಿಸಿದರು.
PublicNext
09/01/2025 04:43 pm