ಹುಬ್ಬಳ್ಳಿ: ಕಲರ್ ಕಲರ್ ಉಡುಪು ಧರಿಸಿದ ಪುಟಾಣಿಗಳು, ಎಲ್ಲಿ ನೋಡಿದರಲ್ಲಿ ಕಲರವ, ಮಕ್ಕಳ ಡ್ಯಾನ್ಸ್ ನೋಡಿ ಫುಲ್ ಖುಷ್ ಆದ ಪಾಲಕರು. ಇವಿಷ್ಟು ಸುಂದರ ದೃಶ್ಯಗಳು ಕಂಡು ಬಂದಿದ್ದು, ಹುಬ್ಬಳ್ಳಿಯ ಕುಲಸಗಲ್ ರಸ್ತೆಯಲ್ಲಿನ ಶ್ರೀ ಮಹಾದುರ್ಗಾ ಕಾಲೋನಿಯಲ್ಲಿರುವ ಗ್ರೋಯಿಂಗ್ ಬಡ್ಸ್ ಇಂಗ್ಲಿಷ್ ಮೀಡಿಯಮ್ ಸ್ಕೂಲ್ ನಲ್ಲಿ. ಈ ಶಾಲೆಯಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಹಲವಾರು ಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಡವರು, ಶ್ರಮಿಕರು ಹಾಗೂ ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಮುತ್ತಮ್ಮ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ಮೂಲಕ, ದುರ್ಗಾ ಡೆವಲಪರ್ಸ್ ಮುಖ್ಯಸ್ಥರಾದ ಹನಮಂತಪ್ಪ ಬಿ. ಮ್ಯಾಗೇರಿ ಅವರು ಗ್ರೋಯಿಂಗ್ ಬಡ್ಸ್ ಶಿಕ್ಷಣ ಸಂಸ್ಥೆಯನ್ನು ಕಟ್ಟಿದ್ದಾರೆ. 9 ವರ್ಷಗಳಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡ್ತಾ ಬಂದಿರುವ ಗ್ರೋಯಿಂಗ್ ಬಡ್ಸ್ ಸ್ಕೂಲ್‌ನಲ್ಲಿ ಪ್ರತಿವರ್ಷದಂತೆ ಈ ವರ್ಷ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡಿದರು.
ಮಕ್ಕಳು ವಿವಿಧ ಉಡುಪುಗಳನ್ನು ಧರಿಸಿ ಡ್ಯಾನ್ಸ್ ಮಾಡಿದರು. ಚಿಕ್ಕ ಮಕ್ಕಳ ಬಾಯಲ್ಲಿ ಗಣ್ಯರನ್ನು ವೆಲ್ ಕಮ್ ಮಾಡಿಕೊಂಡಿರುವುದನ್ನು ನೋಡ್ತಾ ಇದ್ರೆ ಆಹಾ... ಅದೆಷ್ಟು ಚಂದ. ಈ ಗ್ರೋಯಿಂಗ್ ಬಡ್ಸ್ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ರಾಮಣ್ಣ ಬಡಿಗೇರ, ಪ್ರೊ. ಸಂದೀಪ ಬೂದಿಹಾಳ, ಸಮಾಜ ಸೇವಕರಾದ ಡಾ. ರಮೇಶ ಮಹಾದೇವಪ್ಪನವರ, ಜಯತೀರ್ಥ ಕಟ್ಟಿ, ಮಂಜುಳಾ ಹಿರೇಮಠ, ಅರ್ಜುನ ಪಾಟೀಲ್ ಸೇರಿದಂತೆ ಹಲವಾರು ಗಣ್ಯರು ಭಾಗಿಯಾಗಿ ಶಾಲೆಯ ಬಗ್ಗೆ ಆತ್ಮೀಯವಾಗಿ ಹಿತನುಡಿದರು.
ಇನ್ನು ಗ್ರೋಯಿಂಗ್ ಬಡ್ಸ್ ಶಾಲೆಯಲ್ಲಿ ನುರಿತ ಶಿಕ್ಷಕರು ಬೋಧನೆ ಮಾಡುತ್ತಿದ್ದು, ಸದ್ಯ ಈ ಶಾಲೆಯಲ್ಲಿ ಫ್ರೀ ನರ್ಸರಿಯಿಂದ 6ನೇ ತರಗತಿ ವರೆಗೆ ಕ್ಲಾಸ್‌ಗಳು ನಡೆಯುತ್ತಿವೆ. ಈ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ನೋಡಿದ ಪಾಲಕರು ಖುಷಿ ಖುಷಿಯಾಗಿದ್ದರು.
Kshetra Samachara
09/01/2025 05:41 pm