ಕುಂದಗೋಳ: ಎಸ್‌ಡಿಎಂಸಿ ಅಧ್ಯಕ್ಷ ಸದಸ್ಯರ ಆಯ್ಕೆಯ ನಿಯಮ ಗಾಳಿಗೆ ತೂರಿದ ಸರ್ಕಾರಿ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.
ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯ ಎಸ್‌ಡಿಎಂಸಿ ರಚನೆ ನಿಯಮಾನುಸಾರ ಶಾಲೆಯಲ್ಲಿ ಅಧ್ಯಕ್ಷರ ಮಕ್ಕಳು ವ್ಯಾಸಂಗ ಮಾಡುತ್ತಿರಬೇಕು. ಆದರೆ ಈ ನಿಯಮಕ್ಕೆ ವಿರುದ್ಧವಾಗಿ ಶಾಲೆಯಲ್ಲಿ ಮಕ್ಕಳು ವ್ಯಾಸಂಗ ಮಾಡದೆ ಇದ್ದರೂ ಅಂತಹ ವ್ಯಕ್ತಿಯನ್ನೇ ಎಸ್‌ಡಿಎಂಸಿಗೆ ಆಯ್ಕೆ ಮಾಡಿರುವ ಬಗ್ಗೆ ಪಬ್ಲಿಕ್ ನೆಕ್ಸ್ಟ್ 2024 ಡಿಸೆಂಬರ್ 30ರಂದು ವರದಿ ಬಿತ್ತರಿಸಿತ್ತು.
ಈ ವಿಷಯವಾಗಿ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚೆ ಸಹ ನಡೆದು ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಜಗದೀಶ್ ಕಮ್ಮಾರ್ ಕ್ರಮಕ್ಕೆ ಸೂಚನೆ ನೀಡಿದ್ದರು. ಇದೀಗ ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವಿ ಮಾಡಲಗೇರಿ ಅವರು ನಿಯಮ ಮೀರಿದ ಶಾಲೆಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿ, ವಿಷಯ ವರದಿ ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಒಟ್ಟಾರೆ ಮಕ್ಕಳಿಗೆ ಶಿಕ್ಷಣ, ವ್ಯವಸ್ಥೆ ಬಗ್ಗೆ ಸಮರ್ಪಕ ಜ್ಞಾನ ನೀಡಬೇಕಾದ ಶಾಲೆಯ ಆಡಳಿತ ಮಂಡಳಿ ನಿಯಮ ಮೀರಿದೆ. ಈ ಬಗ್ಗೆ ಯಾವ ಕ್ರಮ ಜರುಗಲಿದೆ ಕಾದು ನೋಡಬೇಕಿದೆ ?
ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್ : ಶ್ರೀಧರ ಪೂಜಾರ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
09/01/2025 01:29 pm