ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜ.10ಕ್ಕೆ ಇಸ್ಕಾನ್ ಮಂದಿರದಲ್ಲಿ ವೈಕುಂಠ ಏಕಾದಶಿ: ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ

ಹುಬ್ಬಳ್ಳಿ: ರಾಯಾಪುರದ ಶ್ರೀ ಕೃಷ್ಣ ಬಲರಾಮ ಇಸ್ಕಾನ್ ಮಂದಿರದಲ್ಲಿ ಜ. 10ರಂದು ವೈಕುಂಠ ಏಕಾದಶಿ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಇಸ್ಕಾನ್ ಅಧ್ಯಕ್ಷ ರಾಜೀವ ಲೋಚನದಾಸ ಹಾಗೂ ರಘೋತ್ತಮ ದಾಸ ತಿಳಿಸಿದರು.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಜಂಟಿಯಾಗಿ ಮಾತನಾಡಿದ ಅವರು, ಅಂದು ದೇವಸ್ಥಾನದ ಪ್ರವೇಶ ಸ್ಥಳದಲ್ಲಿ 15 ಅಡಿ ಎತ್ತರ ಹಾಗೂ 11 ಅಡಿ ಅಗಲದ ಸ್ವರ್ಣ ವರ್ಣದ ಭವ್ಯವಾದ ವೈಕುಂಠ ದ್ವಾರವನ್ನು ಸ್ಥಾಪಿಸಲಾಗುವುದು. ವೈಕುಂಠ ದ್ವಾರದ ಪೂಜೆ ಬೆಳಗ್ಗೆ 8.30 ರಿಂದ ಆರಂಭವಾಗಲಿದೆ. ದೇವಾಸ್ಥಾನವನ್ನು ವೈಕುಂಠಕ್ಕೆ ಹೋಲಿಕೆಯಾಗುವಂತೆ ಬಣ್ಣ ಬಣ್ಣದ ಸುಗಂಧಿತ ಪುಷ್ಪಗಳಿಂದ ಸಿಂಗರಿಸಲಾಗುವುದು. ವೈಕುಂಠ ದ್ವಾರವು ರಾತ್ರಿ 9 ಗಂಟೆಯವರೆಗೆ ತೆರೆದಿರಲಿದೆ ಎಂದು ತಿಳಿಸಿದರು.

ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಲಕ್ಷಾರ್ಚನೆ ಸೇವೆಯಲ್ಲಿ ಭಾಗವಹಿಸಬಹುದಾಗಿದೆ. ಇದಕ್ಕಾಗಿ ಶ್ರೀನಿವಾಸ ಗೋವಿಂದನ ಪ್ರತಿಮೆಯನ್ನು ಸಜ್ಜುಗೊಳಿಸಲಾಗುತ್ತಿದೆ. ಲಕ್ಷಾರ್ಚನೆಯು ಬೆಳಗ್ಗೆ 10ರಿಂದ ರಾತ್ರಿ 9 ಗಂಟೆಯವರೆಗೆ ನಡೆಯಲಿದೆ. ಸಂಜೆ 5 ಗಂಟೆಗೆ ವೆಂಕಟೇಶ್ವರ ಹೋಮ ನೆರವೇರಿಸಲಾಗುವುದು. ಸಂಜೆ 6ರಿಂದ ರಾತ್ರಿ 9 ಗಂಟೆಯವರೆಗೆ ನೃತ್ಯ, ನಾಟಕ, ಸಂಗೀತ, ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಸುಮಾರು 20 ಸಾವಿರ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ವಾಹನಗಳ ಪಾರ್ಕಿಂಗ್‌ ಗೆ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನಕ್ಕೆ ಆಗಮಿಸುವ ಎಲ್ಲರಿಗೂ ಅನ್ನ ಪ್ರಸಾದವನ್ನು ವಿತರಿಸಲಾಗುವುದು ಎಂದು ಹೇಳಿದರು.

Edited By : Somashekar
Kshetra Samachara

Kshetra Samachara

08/01/2025 03:01 pm

Cinque Terre

16.86 K

Cinque Terre

0

ಸಂಬಂಧಿತ ಸುದ್ದಿ