ಧಾರವಾಡ: ಧಾರವಾಡದ ಕೃಷಿ ವಿಶ್ವವಿದ್ಯಾಲಯಕ್ಕೆ ಸೇರಿದ ಬೆಳಗಾವಿ ರಸ್ತೆಯಲ್ಲಿರುವ ಜಮೀನಿನಲ್ಲಿ ಯಾರೋ ಪ್ರತಿಷ್ಠಾಪಿಸಿರುವ ಅಯ್ಯಪ್ಪ ಸ್ವಾಮಿ ಹಾಗೂ ಸುಬ್ರಹ್ಮಣ್ಯ ಸ್ವಾಮಿ ಮೂರ್ತಿ ಪ್ರಚಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
ಯಾವಾಗ ಈ ವಿಷಯದ ಮಧ್ಯೆ ಶ್ರೀರಾಮ ಸೇನೆ ಸಂಘಟನೆ ಹಾಗೂ ಸಂಘಟನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಎಂಟ್ರಿ ಕೊಟ್ಟರೋ ಆಗ ಅಯ್ಯಪ್ಪನ ಮೂರ್ತಿಗೆ ತಾತ್ಕಾಲಿಕ ದೇವಸ್ಥಾನವೇ ನಿರ್ಮಾಣವಾಗಿದೆ.
ಕೇವಲ ತಾತ್ಕಾಲಿಕ ದೇವಸ್ಥಾನವಲ್ಲ, ಭಾನುವಾರ ಆ ಜಾಗದಲ್ಲಿ ಮಹಾಪ್ರಸಾದ ಕೂಡ ನಡೆದಿದೆ. ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಅನೇಕ ಮಾಲಾಧಾರಿಗಳು ಆ ಜಾಗದಲ್ಲಿ ಅಯ್ಯಪ್ಪನ ಪೂಜೆ ಮಾಡಿ ಮಹಾಪ್ರಸಾದ ಕೂಡ ಮಾಡಿದ್ದಾರೆ. ಅಯ್ಯಪ್ಪ ಹಾಗೂ ಸುಬ್ರಹ್ಮಣ್ಯ ಸ್ವಾಮಿ ಮೂರ್ತಿಗೆ ವಿಶೇಷ ಪೂಜೆ ಮಾಡಿ ಸ್ಥಳದಲ್ಲೇ ಅಯ್ಯಪ್ಪನ ಜಪ ಮಾಡಿದ್ದಾರೆ. ಆನಂತರ ಮಹಾಪ್ರಸಾದ ಕೂಡ ಮಾಡಿದ್ದು, ಅನೇಕ ಸಾರ್ವಜನಿಕರು ಸ್ಥಳಕ್ಕೆ ಬಂದು ಅಯ್ಯಪ್ಪನ ದರ್ಶನ ಪಡೆಯುವುದರ ಜೊತೆಗೆ ಮಹಾಪ್ರಸಾದ ಕೂಡ ಸ್ವೀಕರಿಸಿದ್ದಾರೆ.
Kshetra Samachara
06/01/2025 12:33 pm