ಹುಬ್ಬಳ್ಳಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ, ಹಾಗೂ ಅವರ ರಾಜೀನಾಮೆಗೆ ಆಗ್ರಹಿಸಿ, ವಿವಿಧ ದಲಿತ ಸಂಘಟನೆಗಳು ಇದೇ ಜನವರಿ 9 ರಂದು ಗುರುವಾರ ಹುಬ್ಬಳ್ಳಿ ಧಾರವಾಡ ಅವಳಿನಗರ ಬಂದ್‌ಗೆ ಕರೆ ನೀಡಿದ್ದಾರೆ.
ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಇಡೀ ರಾಜ್ಯಾದ್ಯಂತ ದಲಿತ ಸಂಘಟನೆಗಳು ಹೋರಾಟ ಮಾಡುತ್ತಲಿವೆ. ಹುಬ್ಬಳ್ಳಿ ಧಾರವಾಡನ್ನು ಸಂಪೂರ್ಣವಾಗಿ ಬಂದ್ ಮಾಡಿ ಹೋರಾಟ ಮಾಡಲು ವಿವಿಧ ದಲಿತ ಸಂಘಟನೆಗಳು ಮುಂದಾಗಿವೆ. ಈ ಬಂದ್ ಗೆ ಸುಮಾರು 100 ಕ್ಕೂ ಅಧಿಕ ಸಕಲ ಸಮಾಜದ ಪ್ರಮುಖ ಸಂಘ ಸಂಸ್ಥೆಗಳು ಇದೇ ಜನವರಿ 4 ಮತ್ತು 5 ರಂದು ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಪೂರ್ವಭಾವಿ ಸಭೆ ಮಾಡಿ ಈಗ ಇದೇ 9 ರಂದು ಸಂಪೂರ್ಣ ಬಂದ್ ಮಾಡಲು ಕರೆ ಕೊಟ್ಟಿದ್ದಾರೆ. ಬಸ್, ಆಟೋ ಚಲಾವಣೆ ಇರಲ್ಲ, ಎಲ್ಲ ಶಾಲಾ ಕಾಲೇಜುಗಳು ಬಂದ್, ವ್ಯಾಪಾರ ವಹಿವಾಟು ಬಂದ್, ಅಂಗಡಿ ಮುಂಗಟ್ಟುಗಳು, ಖಾಸಗಿ ವಾಹನ, ಹೊಟೇಲ್, ಬಾರ್, ಹೀಗೆ ಎಲ್ಲವಕ್ಕೂ ಬಂದ್ ಕರೆಯನ್ನು ಕೊಟ್ಟಿದ್ದಾರೆ. ಅವಳಿ ನಗರದ ಬಂದ್ ನಿಮಿತ್ತ ಶಾಂತಿ ಸದ್ಭಾವನೆಯೊಂದಿಗೆ ಬಡಾವಣೆಗಳಿಂದ ಮೆರವಣಿಗೆ ಮೂಲಕ ಬಂದು, ಹುಬ್ಬಳ್ಳಿಯ ಚನ್ನಮ್ಮ ಸರ್ಕಲ್ ಮತ್ತು ಧಾರವಾಡದ ಜುಬಿಲಿ ಸರ್ಕಲ್ ನಲ್ಲಿ ಸಮಾವೇಶಗೊಳ್ಳಲು ನಿರ್ಧರಿಸಲಾಗಿದೆ ಎಂದು ಮಾಧ್ಯಮ ಮುಂದೆ ದಲಿತ ಸಂಘಟನೆಗಳ ಮುಖಂಡರು ಹೇಳಿದ್ದಾರೆ.
ಇನ್ನು ಈ ಬಂದ್ ಮುಂಜಾನೆ 6 ರಿಂದ ಸಂಜೆ 6 ರವರೆಗೆ ನಡೆಯಲಿದ್ದು, ಸಾರ್ವಜನಿಕರು ಅಂದಿನ ಬಂದ್ ಬೆಂಬಲಿಸಲು ಮನವಿ ಮಾಡಿದ್ದಾರೆ. ಸದ್ಯ ಈ ಹುಬ್ಬಳ್ಳಿ ಧಾರವಾಡ ಬಂದ್ ಕರೆಗೆ ಯಾರ್ಯಾರು ಬೆಂಬಲ ನೀಡುತ್ತಾರೆ. ಮತ್ತು ಜಿಲ್ಲಾಡಳಿತ ಅನುಮತಿ ನೀಡುತ್ತಾ ಎಂಬುದನ್ನು ಕಾಯ್ದು ನೋಡಬೇಕಿದೆ.
-ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
Kshetra Samachara
07/01/2025 11:26 am