ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ವರ್ತಕರ ಸಂಘದ ಅಧ್ಯಕ್ಷರಾಗಿ ಹಂಪಣ್ಣವರ ಆರನೇ ಬಾರಿಗೆ ಆಯ್ಕೆ

ಧಾರವಾಡ: ಧಾರವಾಡದ ದಲಾಲ ಮತ್ತು ವರ್ತಕರ ಸಂಘದ ನೂತನ ಅಧ್ಯಕ್ಷರಾಗಿ ಸತತ ಆರನೇ ಬಾರಿಗೆ ಹಿರಿಯ ವ್ಯಾಪಾರಸ್ಥ ಶಿವಶಂಕರ ಹಂಪಣ್ಣವರ ಅವಿರೋಧವಾಗಿ ಆಯ್ಕೆಯಾದರು.

ಮಂಗಳವಾರ ಬಸವಂತಪ್ಪ‌ ಪೂಜಾರ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಂಘದ ಸಭೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಂಘದ ನೂತನ ಅಧ್ಯಕ್ಷರಾಗಿ ಶಿವಶಂಕರ ಹಂಪಣ್ಣವರ ಅವಿರೋಧವಾಗಿ ಆಯ್ಕೆಯಾದರು. ಈ ಮೂಲಕ ಸತತ ಆರನೇ ಬಾರಿಗೆ ಹಂಪಣ್ಣವರ ಆಯ್ಕೆಯಾಗಿದ್ದಾರೆ.

ತಮ್ಮಣ್ಣ ಯಂಡಿಗೇರಿ (ಉಪಾಧ್ಯಕ್ಷ), ಬಸವರಾಜ ತೆಗ್ಗಿ(ಕಾರ್ಯದರ್ಶಿ), ರಾಜೇಂದ್ರ ಜಾಧವ (ಜಂಟಿ ಕಾರ್ಯದರ್ಶಿ), ಬಸವರಾಜ ಸುರೇಬಾನ (ಖಜಾಂಚಿ), ಎಸ್.ವೈ.ಸಂಕೋಜಿ, ಸಂಗಪ್ಪ ಕಪಲಿ, ಮೈನುದ್ದೀನ್ ಅಮ್ಮಿನಭಾವಿ, ಶಂಕರ‌ ಬೆಂಡಿಗೇರಿ, ಉಮೇಶ ಗುಡ್ಡದ, ಈರಣ್ಣ ಹಂಚಿನಮನಿ ಕಾ.ಕಾ.ಸಮಿತಿ ಸದಸ್ಯರಾಗಿ ಆಯ್ಕೆಯಾದರು.

Edited By : Vijay Kumar
Kshetra Samachara

Kshetra Samachara

08/01/2025 07:23 pm

Cinque Terre

20.64 K

Cinque Terre

1

ಸಂಬಂಧಿತ ಸುದ್ದಿ