ಹುಬ್ಬಳ್ಳಿ : ದೂರದ ಊರಿಂದ, ಕೆಲಸ ಕಾರ್ಯದ ನಿಮಿತ್ತವಾಗಿ ಹುಬ್ಬಳ್ಳಿಗೆ ಆಗಮಿಸಿದ ಸಾರ್ವಜನಿಕರು ಹುಬ್ಬಳ್ಳಿ ಧಾರವಾಡ ಬಂದ್ ಬಿಸಿಗೆ ಪರದಾಟ ನಡೆಸಿದ್ದಾರೆ. ದಿನವೂ ಹುಬ್ಬಳ್ಳಿಗೆ ಕೆಲಸಕ್ಕಾಗಿ ಬರುವ ಕಾರ್ಮಿಕ ವರ್ಗ ಹಾಗೂ ಸಾರ್ವಜನಿಕರು ಬಂದ್ ಹಿನ್ನೆಲೆಯಲ್ಲಿ ಪರದಾಡುವಂತಾಗಿದೆ.
ಹುಬ್ಬಳ್ಳಿ - ಧಾರವಾಡ ಅವಳಿ ನಗರ ಬಂದ್ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಸಾರಿಗೆ ಬಸ್ ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಟ ನಡೆಸಿದ್ದಾರೆ. ಹೊಸ ಬಸ್ ನಿಲ್ದಾಣ, ಹೊಸೂರು ಬಸ್ ನಿಲ್ದಾಣ, ಸಿಬಿಟಿ ಮತ್ತಿತರರ ಕಡೆ ಬಸ್ ಗಳಿಗೆ ಕಾಯುತ್ತಿರೋ ಪ್ರಯಾಣಿಕರು, ಬೇರೆ ಬೇರೆ ಊರುಗಳಿಗೆ ಹೋಗಲಾಗದೆ ಪರದಾಟ ನಡೆಸಿದರು.
ಇನ್ನೂ ಆಟೋ ಸಂಚಾರ ಕೂಡ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ರೈಲ್ವೆ ಮಾರ್ಗವಾಗಿ ಹುಬ್ಬಳ್ಳಿಗೆ ಬಂದ ಜನರು ತಮ್ಮ ಬ್ಯಾಗ್ ಹೊತ್ತು, ಕಾಲ್ನಡಿಗೆಯಲ್ಲಿಯೇ ಪ್ರಯಾಣ ಮುಂದುವರಿಸಿದ್ದಾರೆ.
Kshetra Samachara
09/01/2025 12:20 pm