ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಹೋಗುವ ಭಕ್ತರು ವಾವರ್ ಮಸೀದಿಗೆ ಹೋಗಬೇಡಿ - ಪ್ರಮೋದ್ ಮುತಾಲಿಕ್

ಹುಬ್ಬಳ್ಳಿ: ನಮಗೆ ಅಯ್ಯಪ್ಪ ಸ್ವಾಮಿ ಮುಖ್ಯ ವಿನಃ ವಾವರ ಸ್ವಾಮಿ ಮಸೀದಿ ಅಲ್ಲ. ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ನೇರವಾಗಿ ಶಬರಿಮಲೆ ಪೀಠಕ್ಕೆ ಹೋಗಿ ದರ್ಶನ ಮಾಡಬೇಕು ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಹೇಳಿದ್ದಾರೆ.

ಶಬರಿಮಲೈ ದರ್ಶನದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾವಿರಾರು ವರ್ಷಗಳಿಂದ ಅಯ್ಯಪ್ಪನ ವ್ರತ ಸ್ವೀಕಾರ ಮಾಡಿಕೊಂಡು ಶಬರಿಮಲೆ ಹೋಗುವಂತ ಪ್ರತೀತಿ ಇದೆ. ಕೇರಳದ ಅಯ್ಯಪ್ಪ ಸ್ವಾಮಿ ಬಡಭಕ್ತರ ದೇವರು, ಅಂತಹ ಪವಿತ್ರ ಕ್ಷೇತ್ರಕ್ಕೆ ವ್ಯವಸ್ಥಿತವಾಗಿ ಮೋಸ ಮಾಡಲಾಗುತ್ತಿದೆ. ಇಸ್ಲಾಂನ ವಾವರ್ ಸ್ವಾಮಿ ಮಸೀದಿ ಕಟ್ಟಲಾಗಿದೆ.‌ ಮುಗ್ಧ ಮಾಲಾಧಾರಿಗಳ ಶೋಷಣೆ ಮಾಡುವಂತಹ ವ್ಯವಸ್ಥೆ ನಡೆಯುತ್ತಿದೆ. ಈ ಮಸೀದಿಗೆ ಭೇಟಿ ನೀಡಿ ಆಮೇಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಹೋಗಬೇಕು ಎಂಬ ಕಟ್ಟು ಕಥೆ ಇದೆ. ಅದಕ್ಕೆ ಯಾವುದೇ ಶಾಸ್ತ್ರದಲ್ಲಿ ಮಾನ್ಯತೆ ಇಲ್ಲ ಎಂದರು.

ಇಸ್ಲಾಮರು ದೊಡ್ಡ ಪ್ರಮಾಣದಲ್ಲಿ ಮೋಸ ಮಾಡ್ತಾ ಇದ್ದಾರೆ. ಇದನ್ನು ಶ್ರೀರಾಮ ಸೇನೆ ಸೇರಿ ಹಲವು ಸಂಘಟನೆಗಳು, ಸಂತೋಷ ಗುರೂಜಿ ಖಂಡಿಸಿದ್ದಾರೆ. ಕಳೆದ 20 ವರ್ಷದಿಂದ ನಾವು ಜಾಗೃತಿ ಮೂಡಿಸುತ್ತಿದ್ದೇವೆ. ಈಗ 25% ಕಡಿಮೆಯಾಗಿದೆ. ಇನ್ನೂ 75% ಜನ ಹೋಗ್ತಾ ಇದ್ದಾರೆ. ಮಸೀದಿಯಲ್ಲಿ ಕಾಣಿಕೆ ಹಾಕಿ, ತೆಂಗಿನಕಾಯಿ ಒಡೆಯುವಂತಹ ಪ್ರಕ್ರಿಯೆ ಮಾಡ್ತಾ ಇದ್ದಾರೆ. ಇದು ಖಂಡನೀಯ. ಅಯ್ಯಪ್ಪ ಸ್ವಾಮಿ ಭಕ್ತರು ಯಾವುದೇ ಕಾರಣಕ್ಕೂ ವಾವರ್ ಮಸೀದಿಗೆ ಹೋಗಬಾರದು. ನಮ್ಮ ಪರಂಪರೆ ಹದಿನಾರು ಸಾವಿರ ವರ್ಷದಿಂದ ನಡೆದುಕೊಂಡು ಬಂದಿದೆ. ಇಸ್ಲಾಂ ಹುಟ್ಟಿದ್ದು ಒಂದೂವರೆ ಸಾವಿರ ವರ್ಷದ ಹಿಂದೆ ಅಷ್ಟೇ. ಒಂದೂವರೆ ಸಾವಿರ ವರ್ಷಗಳ ಹಿಂದೆ ಇಸ್ಲಾಂ ಇರಲಿಲ್ಲ. ಇಸ್ಲಾಮೀಕರಣ ಮಾಡುವುದಕ್ಕೆ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳೇ ಪೋಷಣೆ ನೀಡ್ತಾ ಇದ್ದೀವಿ ಎಂದು ಅವರು ಹೇಳಿದರು.

ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಗೋವಿನ ತುಪ್ಪದಿಂದ ದೀಪ ಹಚ್ಚಬೇಕು ಎಂಬ ಪ್ರತೀತಿ ಇದೆ. ಕೆಳಗಡೆ ವಾವರ ಸ್ವಾಮಿ ಮಸೀದಿ, ಇಸ್ಲಾಮರು ಗೋ ಹಂತಕರು, ಗೋ ಭಕ್ಷಕರು ಅವರ ದರ್ಶನ ಮಾಡಿಕೊಂಡು ಹೋದರೆ ಅಯ್ಯಪ್ಪ ಹೇಗೆ ಒಲಿಯುತ್ತಾನೆ..? ನಿಮಗೆ ಕೈಮ ಮುಗಿದು ವಿನಂತಿ ಮಾಡಿಕೊಳ್ಳುತ್ತೇನೆ. ನಮ್ಮ ಧರ್ಮ, ನಮ್ಮ ಅಯ್ಯಪ್ಪ ಸ್ವಾಮಿ, ನಮ್ಮ ದೇಶವನ್ನು ಉಳಿಸಬೇಕು. ಮಸೀದಿಗೆ ಹೋಗದೆ ನೇರವಾಗಿ ಅಯ್ಯಪ್ಪ ಸ್ವಾಮಿ ಪೀಠಕ್ಕೆ ಹೋಗಬೇಕು. ಅಷ್ಟೇ ಅಲ್ಲದೆ ಎಲ್ಲಾ ಗುರುಸ್ವಾಮಿಗಳು ಭಕ್ತರಿಗೆ ಪ್ರಚಾರ ಮಾಡಬೇಕೆಂದ ಮುತಾಲಿಕ್ ಕರೆ ನೀಡಿದರು.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

08/01/2025 05:20 pm

Cinque Terre

87.67 K

Cinque Terre

25

ಸಂಬಂಧಿತ ಸುದ್ದಿ