ಹುಬ್ಬಳ್ಳಿ: ರಸ್ತೆ ದಾಟುತ್ತಿದ್ದ ಮಹಿಳೆಯ ಕೊರಳಲ್ಲಿದ್ದ 20ಗ್ರಾಂ ಚಿನ್ನದ ಸರವನ್ನು ಬೈಕ್‌ನಲ್ಲಿ ಬಂದಿದ್ದ ಕಳ್ಳನೊಬ್ಬ ಕದ್ದು ಪರಾರಿಯಾದ ಘಟನೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅರವಿಂದ ನಗರದಲ್ಲಿ ಈಗಷ್ಟೇ ನಡೆದಿದೆ.
ಶುಭಕಾರ್ಯಕ್ಕೆಂದು ಅರವಿಂದ ನಗರಕ್ಕೆ ಬಂದಿದ್ದ ಕಸಬಾಪೇಟಗ್‌ನ ಮಹಿಳೆ ರಸ್ತೆ ದಾಟುತ್ತಿದ್ದಾಗ ಏಕಾಏಕಿ ಬಂದ ಬೈಕ್ ಸವಾರ ಮಹಿಳೆಯ ಕೊರಳಿಗೆ ಕೈ ಹಾಕಿ ಮಾಂಗಲ್ಯ ಹಾಗೂ ಚಿನ್ನದ ಸರ ಎಗರಿಸಲು ಯತ್ನಿಸಿದ್ದಾನೆ. ಆಗ ಕಳ್ಳನ ಕೈಗೆ ಕೇವಲ ಚಿನ್ನದ ಸರ ಅಷ್ಟೇ ಸಿಕ್ಕಿದ್ದು ಮಾಂಗಲ್ಯ ಸರ್ ಮಹಿಳೆಯ ಕೈಯಲ್ಲಿ ಉಳಿದಿದ್ದು, ಕೂಡಲೇ ಪರಾರಿಯಾಗಿದ್ದಾನೆ.
ಅಲ್ಲೇ ಇದ್ದ ಸ್ಥಳೀಯರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಎಸಿಪಿ ಚಿಕ್ಕಮಠ ಹಾಗೂ ಇನ್ಸ್ಪೆಕ್ಟರ್'ಗಳಾದ ಎಸ್ ಆರ್ ನಾಯ್ಕ, ಅಲಿಶೇಕ್ ಭೇಟಿ ನೀಡಿ ವಿಚಾರಿಸಿದ್ದಾರೆ. ಈ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಕಳ್ಳನ ಪತ್ತೆಗೆ ಮುಂದಾಗಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
07/01/2025 09:10 pm