ಬೆಂಗಳೂರು: ಐಶ್ವರ್ಯಗೌಡ ಬಗ್ಗೆ ಮಾಜಿ ಸಚಿವ ಹಾಲಿ ಶಾಸಕ ವಿನಯ್ ಕುಲಕರ್ಣಿ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಐಶ್ವರ್ಯಗೌಡ ಯಲ್ಲಮ್ಮ ದೇವಿ ದರ್ಶನ ಮಾಡಿಸಿ ಅಂತ ಕೇಳಿದ್ಳು. ನಾನು ನಮ್ಮ ಶಾಸಕರಿಗೆ ಹೇಳಿದ್ದೆ, ಮೂರ್ನಾಲ್ಕು ಬಾರಿ ಐಶ್ವರ್ಯ ನನ್ನನ್ನು ಭೇಟಿ ಮಾಡಿದ್ದಾರೆ.
ನನ್ನ ಅವರ ಮಧ್ಯೆ ಯಾವೂದೇ ವ್ಯವಹಾರ ಇಲ್ಲ, ಐಶ್ವರ್ಯ ಯಾವ ಕಾರು ನನ್ನ ಬಳಿ ಇಲ್ಲ, ಇದ್ದರೆ ಪೊಲೀಸರು ತೆಗೆದುಕೊಂಡು ಹೋಗಲಿ, ಆಕೆ ಡಿಕೆ ಸುರೇಶ್, ನಿಖಿಲ್‌ಕುಮಾರ್ ಸ್ವಾಮಿ ಸೇರಿದಂತೆ ಹಲವರ ಹೆಸರನ್ನು ಹೇಳಿಕೊಂಡಿದ್ದಾರೆ. ಇದ್ರಿಂದ ನನ್ನ ಹೆಸರಿಗೆ ಯಾವೂದೇ ಡ್ಯಾಮೇಜ್ ಆಗಿಲ್ಲ, ರಾಜಕಾರಣಿಗಳು ಅಂದ್ರೆ ನೂರ್ ಜನ ಬರ್ತಾರೆ ಅಂತ ವಿನಯ್ ಕುಲಕರ್ಣಿ ಉತ್ತರಿಸಿದ್ದಾರೆ.
ಇನ್ನು ಇದಕ್ಕೂ ಮುನ್ನ ವಿನಯ್ ಕುಲಕರ್ಣಿಗೆ ನೋಟಿಸ್ ನೀಡಲು ಸಬ್ ಇನ್ಸ್ಪೆಕ್ಟರ್ ಕೂಡ ಕೋರ್ಟ್ ಬಳಿ ಬಂದಿದ್ರು. ಐಶ್ವರ್ಯ ಪತಿ ಹರೀಶ್ ಗೌಡ ಹೆಸರಿನಲ್ಲಿರೋ KA 03 NN 8181 ನಂಬರ್‌ನ ಬೆಂಜ್ ಕಾರನ್ನ ಹಾಜರು ಪಡಿಸುವಂತೆ ನೋಟಿಸ್ ನೀಡಲು ಮುಂದಾಗಿದ್ರು. ಆದ್ರೆ ವಿನಯ್ ಕುಲಕರ್ಣಿ ನೋಟಿಸ್ ಪಡೆಯಲು ನಿರಾಕರಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
07/01/2025 10:43 pm