ಧಾರವಾಡ: ಡಾ.ಬಾಬಾಸಾಹೇಬ್ ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೀಡಿದ್ದಾರೆ ಎನ್ನಲಾದ ಹೇಳಿಕೆ ಖಂಡಿಸಿ ದಲಿತಪರ ಸಂಘಟನೆಗಳು ನಾಳೆ ಹುಬ್ಬಳ್ಳಿ, ಧಾರವಾಡ ಬಂದ್‌ಗೆ ಕರೆ ನೀಡಿವೆ.
ಈ ಬಗ್ಗೆ ಮಾಹಿತಿ ನೀಡಿದ ದಲಿತ ಮುಖಂಡ ಪರಮೇಶ್ವರ ಕಾಳೆ, ನಾಳೆ ನಮ್ಮದು ಶಾಂತಿಯುತ ಬಂದ್ ಇರಲಿದೆ. ಅಂಗಡಿ, ಮುಂಗಟ್ಟು ಹಾಗೂ ಬಸ್‌ಗಳನ್ನು ಬಂದ್ ಮಾಡಲಿದ್ದೇವೆ. ಶಾಲಾ, ಕಾಲೇಜುಗಳ ಬಂದ್‌ಗೂ ಮನವಿ ಮಾಡಿದ್ದೇವೆ ಎಂದರು.
ನಮ್ಮ ಬಂದ್‌ಗೆ ಕನ್ನಡಪರ ಸಂಘಟನೆಗಳೂ ಬೆಂಬಲ ಸೂಚಿಸಿವೆ. ಕಾಂಗ್ರೆಸ್‌ನವರು ನಮ್ಮ ಹೋರಾಟವನ್ನು ಬೆಂಬಲಿಸುವುದಾದರೆ ಹೋರಾಟದಲ್ಲಿ ಪಾಲ್ಗೊಳ್ಳಬಹುದು ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
08/01/2025 08:04 pm