ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಧಾರವಾಡದಲ್ಲಿ ಬಂದ್ ಸ್ಥಿತಿಗತಿ ಪರಿಶೀಲಿಸಿದ ಪೊಲೀಸ್ ಆಯುಕ್ತ ಶಶಿಕುಮಾರ್

ಧಾರವಾಡ: ಇಂದು ಹುಬ್ಬಳ್ಳಿ, ಧಾರವಾಡ ಅವಳಿನಗರಗಳನ್ನು ದಲಿತ ಸಂಘಟನೆಗಳು ಬಂದ್ ಮಾಡಿದ್ದು, ಧಾರವಾಡದಲ್ಲಿ ನಡೆಯುತ್ತಿರುವ ಬಂದ್ ಹಾಗೂ ಪ್ರತಿಭಟನೆಯ ಸ್ಥಿತಿಗತಿಯನ್ನು ಪೊಲೀಸ್ ಆಯುಕ್ತ ಎನ್.ಶಶಿಕುಮಾರ ಅವರು ಪರಿಶೀಲಿಸಿದರು.

ಧಾರವಾಡದ ಜ್ಯುಬಿಲಿ ವೃತ್ತದಲ್ಲಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಬಂದ ಪೊಲೀಸ್ ಆಯುಕ್ತರು, ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿದರು. ಪೊಲೀಸ್ ಆಯುಕ್ತರೊಂದಿಗೆ ಡಿಸಿಪಿ ರವೀಶ್ ಕೂಡ ಆಗಮಿಸಿ ಬಂದ್ ಸ್ಥಿತಿಗತಿ ಪರಿಶೀಲಿಸಿದರು.

ಧಾರವಾಡದ ಜ್ಯುಬಿಲಿ ವೃತ್ತದಲ್ಲಿ ಪ್ರತಿಭಟನಾಕಾರರ ಜಮಾಯಿಸಿ ಕೇಂದ್ರದ ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

Edited By : Suman K
Kshetra Samachara

Kshetra Samachara

09/01/2025 12:40 pm

Cinque Terre

38.99 K

Cinque Terre

1

ಸಂಬಂಧಿತ ಸುದ್ದಿ