ಧಾರವಾಡ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ.ಅಂಬೇಡ್ಕರ್ ಅವರ ವಿರುದ್ಧ ಹೇಳಿದ್ದಾರೆನ್ನಲಾದ ಹೇಳಿಕೆ ಖಂಡಿಸಿ ದಲಿತಪರ ಸಂಘಟನೆಗಳು ನಾಳೆ ಹುಬ್ಬಳ್ಳಿ, ಧಾರವಾಡ ಬಂದ್‌ಗೆ ಕರೆ ನೀಡಿವೆ.
ಮುನ್ನಾ ದಿನವಾದ ಬುಧವಾರ ಧಾರವಾಡದ ಕಡಪಾ ಮೈದಾನದಿಂದ ದಲಿತಪರ ಸಂಘಟನೆಗಳ ಕಾರ್ಯಕರ್ತರು, ಬೈಕ್ ರ್‍ಯಾಲಿ ಮಾಡಿ ನಾಳೆ ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡುವಂತೆ ವ್ಯಾಪಾರಸ್ಥರಲ್ಲಿ ಮನವಿ ಮಾಡಿದೆ.
ಬಂದ್ ಹಿನ್ನೆಲೆ ಧಾರವಾಡದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಕಡಪಾ ಮೈದಾನದಿಂದಲೇ ಪೊಲೀಸರು ರೂಟ್ ಮಾರ್ಚ್ ನಡೆಸಿದರು.
Kshetra Samachara
08/01/2025 08:04 pm