ಹುಬ್ಬಳ್ಳಿ: ಅದು ಅವಳಿನಗರದ ಮಹತ್ವಾಕಾಂಕ್ಷೆಯ ಯೋಜನೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆ ಯೋಜನೆ ಆರಂಭ ಮಾಡೋ ಮುನ್ನವೇ ಸಾಕಷ್ಟು ಅಪಸ್ವರ ಕೇಳಿ ಬಂದಿದ್ದವು. ಹಾಗೋ ಹೀಗೋ ಯೋಜನೆ ಆರಂಭವಾಗಿದೆ. ಆದ್ರೆ ಆ ಯೋಜನೆಯಿಂದ ಆಗಿರೋ ಅನಕೂಲಕ್ಕಿಂತ ಅನಾನೂಕಲವೇ ಜಾಸ್ತಿ. ಆರ್ಥಿಕವಾಗಿಯೂ ಆ ಯೋಜನೆ ಸಾಕಷ್ಟು ನಷ್ಟದಲ್ಲಿದೆ. ಅವಳಿ ನಗರದಲ್ಲಿರೋ ಆ ಯೋಜನೆಗೆ ಇದೀಗ ಬಂದ್ ಆಗೋ ಲಕ್ಷಣವೇ ಹೆಚ್ಚಾಗಿದೆ. ಅದರ ಬದಲಾಗಿ ಮತ್ತೊಂದು ಯೋಜನೆ ಶೀಘ್ರವೇ ಅವಳಿ ನಗರಕ್ಕೆ ಬರಲಿದೆ. ಇಲ್ಲಿದೇ ಯೋಜನೆ ಕುರಿತು ಸ್ಟೋರಿ...
ಹುಬ್ಬಳ್ಳಿ ಧಾರವಾಡ ನಡುವೆ ಆರಂಭವಾದ BRTS ಯೋಜನೆ, ಹೊರ ರಾಜ್ಯದಲ್ಲಿ ವಿಫಲವಾಗಿ ರಾಜ್ಯಕ್ಕೆ ತರೋವಾಗಲೇ ಸಾಕಷ್ಟು ವಿವಾದವಾಗಿತ್ತು. BRTS ವ್ಯಾಪ್ತಿಯಲ್ಲಿ ನಿತ್ಯ ನೂರಾರು ಚಿಗರಿ ಬಸ್ ಗಳು ಸಂಚಾರ ಮಾಡುತ್ತವೆ. ಅದಕ್ಕೆಂದೆ ಪ್ರತ್ಯೇಕ ಕಾರಿಡಾರ್ ಇದೆ. ಅಲ್ಲಿ ಬೇರೆ ಯಾವ ವಾಹನಗಳಿಗೂ ಅವಕಾಶ ಇಲ್ಲ.
ಹೀಗಾಗಿ ಅವಳಿನಗರದ ಪ್ರಯಾಣಿಕರಿಗೆ ಅನಕೂಲವಾಗಲು ಯೋಜನೆ ಜಾರಿಯಾಗಿತ್ತು. ಆದ್ರೆ ಈ ಯೋಜನೆಯಿಂದ ಅನಾನಕೂಲವೇ ಜಾಸ್ತಿಯಾಗಿದೆ. ಚಿಗರಿ ಸಾರಿಗೆ ಮೇಲೆ ಸಾಕಷ್ಟು ಆರೋಪಗಳಿವೆ. ದಿನಕ್ಕೆ ಒಂದಲ್ಲಾ ಒಂದು ಕಡೆ ಚಿಗರಿ ಬಸ್ ಅಪಘಾತಕ್ಕೆ ಒಳಗಾಗತ್ತೆ. ಕೆಲ ಕಡೆ ಬಸ್ ಗಳು ಕೆಟ್ಟು ನಿಂತಿವೆ. ಈ ಬಸ್ ನಿಂದ ತಿಂಗಳಿಗೆ ಹೆಚ್ಚು ಕಡಿಮೆ 40 ಕೋಟಿ ನಷ್ಟವಾಗ್ತಿದೆ. ಹೀಗಿದ್ರೂ ಚಿಗರಿ ಬಸ್ ಓಡಾಡುತ್ತಿವೆ.
ಈ ಯೋಜನೆ ವಿರೋಧಿಸಿ ಅನೇಕ ಹೋರಾಟಗಳು ಆಗಿವೆ. ಆ ಕಾರಿಡಾರ್ ನಲ್ಲಿ ಬೇರೆ ವಾಹನಗಳಿಗೂ ಅವಕಾಶ ಕೊಡಬೇಕು ಅನ್ನೋ ಕೂಗು ಇತ್ತು. ಆದ್ರೆ ಇದೀಗ ಈ ಯೋಜನೆ ಸಂಪೂರ್ಣ ಬಂದ್ ಆಗತ್ತಾ ಅನ್ನೋ ಅನುಮಾನ ಮೂಡಿದೆ. ಯಾಕಂದ್ರೆ ಚಿಗರಿ ಬಸ್ ಬದಲಾಗಿ ಹುಬ್ಬಳ್ಳಿ ಧಾರವಾಡಕ್ಕೆ ಎಲೆಕ್ಟ್ರಿಕ್ ಬಸ್ ಬರೋ ಸಾಧ್ಯತೆ ಇದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಚಿಂತನೆ ನಡೆಸಿದ್ದಾರೆ.
ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಸುಮಾರು ದಿನವೊಂದಕ್ಕೆ ನೂರಕ್ಕೂ ಹೆಚ್ಚು ಚಿಗರಿ ಬಸ್ ಓಡಾಡುತ್ತವೆ. ಹವಾ ನಿಯಂತ್ರಣ ಬಸ್ ಆಗಿರೋ ಕಾರಣಕ್ಕೆ ಸಾರಿಗೆ ಇಲಾಖೆಗೆ 40 ಕೋಟಿಗೂ ಅಧಿಕ ಹೊರೆಯಾಗುತ್ತಿದೆ. ಇದೇ ಕಾರಣಕ್ಕೆ ಚಿಗರಿ ಬಸ್ ಒಡಾಡೋ ಕಾರಿಡಾರ್‌ನಲ್ಲಿ ಎಲೆಕ್ಟ್ರಿಕಲ್ ಬಸ್ ಓಡಿಸೋ ಯೋಜನೆಗೆ ಚಿಂತನೆ ನಡೆಸಲಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಲಾಡ್ ಅವರು ಭೇಟಿ ನೀಡಿದ್ದ HESS ಲೈಟ್ ಟ್ರಾಮ್ ಗಳು ವಿದ್ಯುತ್ ಮೂಲಕ ಚಲಿಸುತ್ತವೆ. ಇದು ಸಾಂಪ್ರದಾಯಿಕ ಡೀಸೆಲ್ ಚಾಲಿತ ಬಸ್‌ಗಳಿಗೆ ಹೋಲಿಸಿದರೆ ವಾಯಮಾಲಿನ್ಯವನ್ನು ಗಣನೀಯವಾಗಿ ಕಡಿಮೆ ಮಾಡಿ ವಾಯುಗುಣಮಟ್ಟಕ್ಕೆ ಧನಾತ್ಮಕ ಕೊಡುಗೆ ನೀಡುತ್ತದೆ, ಮತ್ತು ಹವಾಮಾನ ಬದಲಾವಣೆಯನ್ನು ಎದುರಿಸಲು ಸಹಾಯ ಮಾಡುತ್ತದೆ. ಲೈಟ್ ಟ್ರಾಮ್ ಆಂತರಿಕ ದಹನಕಾರಿ ಎಂಜಿನ್ ಹೊಂದಿರುವ ವಾಹನಗಳಿಗಿಂತ ನಿಶ್ಯಬ್ದವಾಗಿದೆ. ಇದು ನಗರ ಪ್ರದೇಶಗಳಲ್ಲಿ ಶಬ್ದ ಮಾಲಿನ್ಯ ಕಡಿಮೆ ಮಾಡುತ್ತದೆ.
ಇನ್ನು ನಿರ್ವಹಣಾ ವೆಚ್ಚಕ್ಕೆ ಬರುವುದಾರೆ ಇದು ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿದೆ. ರಿಯಲ್ ಟೈಮ್ ಟ್ರ್ಯಾಕಿಂಗ್ ವ್ಯವಸ್ಥೆಗಳು, ವೈ-ಫೈ ಸಂಪರ್ಕ ಮತ್ತು ಶಕ್ತಿ-ಸಾಮರ್ಥ್ಯ HVAC ವ್ಯವಸ್ಥೆ ಇದರಲ್ಲಿವೆ. ಈ ಕುರಿತು ಮಾತು ಕತೆ ನಡೆಯುತ್ತಿದ್ದು, ಶೇಕಡಾ 50ರಷ್ಟು ಸಕ್ಸಸ್ ಆಗಿದೆ ಅಂತಾರೆ ಲಾಡ್.
ಇನ್ನೂ ಅವಳಿ ನಗರದ ಜನರು ಕೂಡ ಈ ಯೋಜನೆ ಸ್ವಾಗತ ಮಾಡಿ ಕೆಲ ಸಲಹೆ ಕೊಟ್ಟಿದ್ದಾರೆ.
ಮಲ್ಲೇಶ್ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
08/01/2025 06:57 pm