ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ ಧಾರವಾಡ ಬಂದ್ ಗೆ ಭರಪೂರ ಬೆಂಬಲ : ಅಂಗಡಿ ಮುಂಗಟ್ಟು, ವಾಹನಗಳ ಸಂಚಾರ ಬಂದ್..!

ಹುಬ್ಬಳ್ಳಿ : ಅಮಿತ್ ಶಾ ಹೇಳಿಕೆ ಖಂಡಿಸಿ ಹುಬ್ಬಳ್ಳಿ ಧಾರವಾಡ ಅವಳಿನಗರ ಬಂದ್ ಹಿನ್ನಲೆಯಲ್ಲಿ ನಡು ರಸ್ತೆಯಲ್ಲಿ ವಾಹನ ಬಂದ್ ಮಾಡಿಸುತ್ತಿರೋ ಸಂಘಟಕರು, ಸಿಟಿ ಒಳಗೆ ಬರುವ ವಾಹನಗಳನ್ನು ತಡೆಯುವ ಮೂಲಕ ಬಂದ್ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.

ಚೆನ್ನಮ್ಮ ವೃತ್ತದಲ್ಲಿಯೇ ವಾಹನ ಬಂದ್ ಮಾಡಿಸುತ್ತಿರೊ ಕಾರ್ಯಕರ್ತರು, ಚೆನ್ನಮ್ಮ ವೃತ್ತದಲ್ಲಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಕನ್ನಡ ಪರ ಸಂಘಟನೆ ಕಾರ್ಯಕರ್ತನಿಂದ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದು, ಹಳೇ ಬಸ್ ನಿಲ್ದಾಣದ ಬಳಿ ಅಂಗಡಿ ಮುಂಗಟ್ಟು ಬಂದ್ ಮಾಡಿಸಿದ ದಲಿತ ಸಂಘಟನೆ ಕಾರ್ಯಕರ್ತರು.

ಇನ್ನೂ ಅಂಬೇಡ್ಕರ್ ಭಾವಚಿತ್ರ ಹಿಡಿದು ಪ್ರತಿಭಟನಾ ರ್‍ಯಾಲಿ ನಡೆಸಿದ್ದು,ರಸ್ತೆಗಿಳಿದ ವಾಹನಗಳ ಟೈಯರ್ ಗಾಳಿ ಬಿಡ್ತಿರೋ ಪ್ರತಿಭಟನಾಕಾರರು. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.

Edited By : Suman K
Kshetra Samachara

Kshetra Samachara

09/01/2025 12:34 pm

Cinque Terre

20.25 K

Cinque Terre

1

ಸಂಬಂಧಿತ ಸುದ್ದಿ