ಹುಬ್ಬಳ್ಳಿ : ಸೌಥ್ ವೆಸ್ಟರ್ನ್ ರೈಲ್ವೆ ಗುತ್ತಿಗೆದಾರರ ಅಸೋಸಿಯೇಷನ್, ಭಗತ್ ಸಿಂಗ್ ಸೇವಾ ಸಂಘ ಹಾಗೂ ವಿ.ಎಸ್.ವಿ ಪ್ರಸಾದ್ ಅಭಿಮಾನಿ ಬಳಗದ ವತಿಯಿಂದ, ಸಮಾಜ ಸೇವಕ ಸ್ವರ್ಣ ಗ್ರೂಪ್ ಅಧ್ಯಕ್ಷರಾದ ಡಾ.ವಿ.ಎಸ್.ವಿ.ಪ್ರಸಾದ್ ಅವರ ಜನ್ಮದಿನದ ನಿಮಿತ್ತವಾಗಿ ಜನವರಿ 9 ರಂದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವೇಂಕಟೆಶ್ ಹುಡುಕಿ ಹೇಳಿದರು.
ಕಳೆದ ಹಲವಾರು ವರ್ಷಗಳಿಂದ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಉದ್ಯಮಿ ಡಾ.ವಿ.ಎಸ್.ವಿ.ಪ್ರಸಾದ್ ಅವರ, ಜನವರಿ 9 ರಂದು ಜನ್ಮದಿನ ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಅಂದು ಹಳೇಹುಬ್ಬಳ್ಳಿ ಇಂಡಿಪಂಪ್ ಹತ್ತಿರವಿರುವ ಸರ್ಕಾರಿ ಪ್ರಾಥಮಿಕ ಶಾಲೆ ನಂಬರ್ 19 ಗೆ ಕಂಪ್ಯೂಟರ್, ಪ್ರಿಂಟರ್, 10 ವೈಟ್ ಬೋರ್ಡ್, 4 ಸಿಸಿ ಕ್ಯಾಮರಾ, ಆರ್ ಓ ವಾಟರ್ ಪ್ಲಾಂಟ್ ಅಳವಡಿಸಲಾಗುವುದು ಎಂದರು.
ಬಳಿಕ ಬಂಜಾರ ಕಾಲೋನಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋಕುಲರಸ್ತೆ 65 ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಹಾಗೂ ಸ್ಕೂಲ್ ಬ್ಯಾಗ್, ಕುರ್ಚಿಗಳನ್ನು ನೀಡಲಾಗುವುದು ಎಂದು ಹೇಳಿದರು.
ಇದಾದನಂತರ ಗಬ್ಬೂರಿನಲ್ಲಿರುವ ವಿಶ್ವದರ್ಮ ಅಂಗವಿಕಲರ ಶಾಲೆಯ ವಿದ್ಯಾರ್ಥಿಗಳಿಗೆ ಭೋಜನ ವ್ಯವಸ್ಥೆ ಮಾಡಲಾಗುತ್ತಿದೆ. ಇದಲ್ಲದೇ ಭಗತ್ ಸಿಂಗ್ ಸೇವಾ ಸಂಘದಿಂದ ಮಂಟೂರರಸ್ತೆ, ಕನ್ಯಾನಗರದಲ್ಲಿರುವ ಬಾಲಾಜಿ ದೇವಸ್ಥಾನದ ಗೋಶಾಲೆಗೆ ಮೇವು ವಿತರಣೆ ಹಾಗೂ ರಾಷ್ಟ್ರೋತ್ಥಾನ ರಕ್ತನಿಧಿ ಸಹಯೋಗದಲ್ಲಿ ಸ್ವರ್ಣಾ ಪ್ಯಾರೈಡೇಸ್ ನಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಹೇಳಿದರು.
Kshetra Samachara
07/01/2025 03:33 pm