ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ - ಧಾರವಾಡ ಬಂದ್ ಕರೆಯನ್ನು ಕಾಂಗ್ರೆಸ್ ಹಿಂಪಡೆಯದಿದ್ರೆ ನಾವೂ ಹೋರಾಟ ಮಾಡುತ್ತೇವೆ - ಬೆಲ್ಲದ್ ವಾರ್ನರ್

ಹುಬ್ಬಳ್ಳಿ: ದಲಿತ ಸಂಘಟನೆಗಳಿಂದ ಇದೇ 9ರಂದು ಹುಬ್ಬಳ್ಳಿ-ಧಾರವಾಡ ಬಂದ್ ಕರೆ ವಿಚಾರ, ಸಂವಿಧಾನ‌ ಹಾಗೂ ಸಂವಿಧಾನ‌ಶಿಲ್ಪಿಗೆ ಅತೀ ಹೆಚ್ಚು ಅವಮಾನ ಮಾಡಿದವರು ಕಾಂಗ್ರೆಸ್‌ನವರೆಂದು ಹುಬ್ಬಳ್ಳಿಯಲ್ಲಿ ವಿಪಕ್ಷ ಉಪನಾಯಕ‌ ಅರವಿಂದ ಬೆಲ್ಲದ್ ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಎರಡು ಬಾರಿ ಅಂಬೇಡ್ಕರ್ ಅವರನ್ನ ಸೋಲಿಸಿದ್ರು. ಕೊನೆಗೆ ಕಾಂಗ್ರೆಸ್‌ನವರ ಕಾಟಕ್ಕೆ ಅಂಬೇಡ್ಕರ್ ಅವರು ಬೇಸತ್ತಿದ್ದರು. ಅವರು ನಿಧನರಾದಾಗ ಅವರ ಅಂತ್ಯಕ್ರಿಯೆಗೂ ಸಹ‌ ಕಾಂಗ್ರೆಸ್‌ನವರು ಜಾಗ ಕೊಡಲಿಲ್ಲ. ಅವರು ಬದುಕಿದ್ದಾಗ ಹಾಗೂ ನಿಧನರಾದಾಗಲೂ ಅಂಬೇಡ್ಕರ್ ಅವರಿಗೆ ಸಾಕಷ್ಟು ಅವಮಾನ‌ಮಾಡಿದ್ದಾರೆ.

ಆದ್ರೂ ಸಹ ಮುಗ್ಧ ದಲಿತರನ್ನ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಅಂಬೇಡ್ಕರ್ ಅವರ ಹೆಸರಿನ‌ ಮೂಲಕ‌ ದಲಿತರ ಮತ ಪಡೆಯುವ ತಂತ್ರ ಮಾಡಿದ್ದಾರೆ. ಮತ ಬ್ಯಾಂಕ್ ರಾಜಕೀಯ ಮಾಡುವ ಕೆಲಸ‌ವನ್ನ ಕಾಂಗ್ರೆಸ್ ನವರು ಮಾಡುತ್ತಿದ್ದಾರೆ ಎಂದರು

ಅವಳಿ ನಗರ ಬಂದ್ ಮಾಡುವ ಮೂಲಕ ಜನಸಾಮಾನ್ಯರಿಗೆ ಕಾಂಗ್ರೆಸ್ ಸಮಸ್ಯೆ ತಂದೊಡ್ಡುತ್ತಿದೆ. ಬೆಲೆ ಏರಿಕೆಯಿಂದ ಜನಸಾಮಾನ್ಯರು ಸಮಸ್ಯೆ ಅನುಭವಿಸುತ್ತಿದ್ದಾರೆ. ಅದರ ನಡುವೆಯೂ ಈ ರೀತಿ ಬಂದ್ ಮಾಡುವ ಮೂಲಕ ಜನರಿಗೆ ಸಂಕಷ್ಟ ಎದುರಾಗುವಂತೆ ಮಾಡುತ್ತಿದ್ದಾರೆ. ಈ ಕೂಡಲೇ ಈ ಬಂದ್ ವಾಪಸ್ ಪಡೆಯಬೇಕು. ಅವಳಿನಗರ ಬಂದ್ ವಾಪಸ್ ಪಡೆಯದೇ ಹೋದಲ್ಲಿ ಅದಕ್ಕೆ ಪ್ರತಿಯಾಗಿ ಬಿಜೆಪಿಯಿಂದ ಬಂದ್ ಕರೆ ನೀಡಬೇಕಾಗುತ್ತದೆ. ನಾವು ಕೂಡ ಇದಕ್ಕೆ ಪ್ರತಿಯಾಗಿ ಬಂದ್ ಕರೆ ನೀಡುತ್ತೇವೆ. ಇದರಿಂದಾಗುವ ಸಾರ್ವಜನಿಕ ಸಮಸ್ಯೆಗೆ ಕಾಂಗ್ರೆಸ್ ನವರೇ ನೇರ ಹೊಣೆಯನ್ನ‌ ಹೊರಬೇಕಾಗುತ್ತೆ.

ಕಾಂಗ್ರೆಸ್ ಬಂದ್ ಕರೆಗೆ‌ ಪ್ರತಿಯಾಗಿ ಬಿಜೆಪಿಯಿಂದ ಬಂದ್ ಎಚ್ಚರಿಕೆ ನೀಡಿದ ಶಾಸಕ ಅರವಿಂದ ಬೆಲ್ಲದ್. ಕಾಂಗ್ರೆಸ್ ಬಂದ್ ಕರೆ ನಂತರ ಬಿಜೆಪಿಯಿಂದಲೂ ಬಂದ್ ಕರೆ ನೀಡಲಿದ್ದೇವೆ ಎಂದ ಅರವಿಂದ ಬೆಲ್ಲದ್ ಹೇಳಿದರು

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

07/01/2025 03:17 pm

Cinque Terre

109.01 K

Cinque Terre

10

ಸಂಬಂಧಿತ ಸುದ್ದಿ