ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: "ನಾಳೆ ಹು-ಧಾ ಬಂದ್‌ಗೆ ನಮ್ಮ ಬೆಂಬಲ ಇಲ್ಲಾ" - ದಲಿತ ಮುಖಂಡ ಹಾಲಹರವಿ

ಹುಬ್ಬಳ್ಳಿ: ಡಾ.ಬಿ.ಆರ್ ಅಂಬೇಡ್ಕರ್ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವಹೇಳನಕಾರಿ ಹೇಳಿಕೆ ಖಂಡಿಸಿ, ನಾಳೆ 9 ರಂದು ಅವಳಿ ನಗರವನ್ನು ಬಂದ್ ಮಾಡಲು ವಿವಿಧ ಸಂಘಟನೆಗಳು ಕರೆ ನೀಡಿದ್ರೆ, ಇತ್ತ ಅದೇ ದಲಿತ ಮುಖಂಡ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಅವರು ಬಂದ್‌ಗೆ ನಮ್ಮ ಬೆಂಬಲ ಇಲ್ಲವೆಂದು ಪ್ರತಿಕ್ರಿಯಿಸಿದ್ದಾರೆ.

ಪಬ್ಲಿಕ್ ನೆಕ್ಸ್ಟ್ ಮೂಲಕ ಮಾತನಾಡಿದ ಅವರು, ನಾಳಿನ ಬಂದ್ ಕರೆ ಅವರವರ ವೈಯಕ್ತಿಕ, ನಾವು ಕೂಡ ಅಂಬೇಡ್ಕರ್ ಅವರ ಅನುಯಾಯಿಗಳು, ಇನ್ನೂವರೆಗೂ ನಮ್ಮ ಗಮನಕ್ಕೆ ತಂದಿಲ್ಲ, ಅದಷ್ಟೇ ಅಲ್ಲದೇ ಯಾರದ್ದೋ ರಾಜಕೀಯ ವ್ಯಕ್ತಿಗಳ ಮಾತು ಕೇಳಿ ಹುಬ್ಬಳ್ಳಿ ಧಾರವಾಡ ಬಂದ್ ಮಾಡಲು ಹೊರಟಿದ್ದಾರೆ. ಕೆಲವೊಂದಿಷ್ಟು ಜನರು ಸೇರಿಕೊಂಡು ತಮ್ಮ ಹಿತಾಸಕ್ತಿಗಾಗಿ ಬಂದ್‌ಗೆ ಮುಂದಾಗಿದ್ದಾರೆ ಇದು ಸರಿ ಅಲ್ಲ, ಇದಕ್ಕೆ ನಮ್ಮ ಬೆಂಬಲ ಇಲ್ಲ ಎಂದರು.

Edited By : Ashok M
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

08/01/2025 03:33 pm

Cinque Terre

69.21 K

Cinque Terre

19

ಸಂಬಂಧಿತ ಸುದ್ದಿ