ಹುಬ್ಬಳ್ಳಿ : ವಾಣಿಜ್ಯ ಚಟುವಟಿಕೆಗಳ ಮೂಲಕವೇ ವಾಣಿಜ್ಯನಗರಿ ಎಂದು ಖ್ಯಾತಿ ಪಡೆದಿರುವ ಹುಬ್ಬಳ್ಳಿ ದಿನವೂ ಜನಜಂಗುಳಿಯಿಂದ ಕೂಡಿರುತ್ತಿತ್ತು. ಆದರೆ ಕೋವಿಡ್ ನಂತರ ಮತ್ತೇ ಹುಬ್ಬಳ್ಳಿ ಸ್ತಬ್ಧವಾಗಿದೆ.
ಅಮಿತ್ ಶಾ ಹೇಳಿಕೆ ಖಂಡಿಸಿ ಹುಬ್ಬಳ್ಳಿ ಧಾರವಾಡ ಅವಳಿನಗರ ಬಂದ್ ಹಿನ್ನಲೆಯಲ್ಲಿ ವಾಣಿಜ್ಯನಗರಿ ಹುಬ್ಬಳ್ಳಿ ಸಂಪೂರ್ಣ ಸ್ತಬ್ಧವಾಗಿದ್ದು, ವಾಣಿಜ್ಯನಗರಿ ಸೈಲೆಂಟ್ ಆಗಿದೆ.
ಚೆನ್ನಮ್ಮ ವೃತ್ತದಲ್ಲಿಯೇ ಹೋರಾಟಗಾರರು, ದಲಿತ ಸಂಘಟನೆಯ ಮುಖಂಡು ಬೀಡು ಬಿಟ್ಟಿದ್ದು, ಬಂದ್ ಗೆ ಬೆಂಬಲ ದೊರೆತಂತಾಗಿದೆ. ಹೌದು.. ಸಂಸತ್ತಿನಲ್ಲಿ ಅಮಿತ್ ಶಾ ಹೇಳಿಕೆಗೆ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಹೋರಾಟದ ಕಿಚ್ಚು ಹೊತ್ತಿಕೊಂಡಿದ್ದು, ದಿನವೂ ಗಿಜುಗುಡುತ್ತಿದ್ದ ಹುಬ್ಬಳ್ಳಿ ಈಗ ಫುಲ್ ಸೈಲೆಂಟ್ ಆಗಿದೆ.
ಇನ್ನೂ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿದ್ದು, ಅಹಿತಕರ ಘಟನೆಗಳು ನಡೆಯದಂತೇ ಪೊಲೀಸರ ಬೀಡು ಬಿಟ್ಟಿದ್ದು, ಹೈ ಅಲರ್ಟ್ ಘೋಷಣೆ ಮಾಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
09/01/2025 09:13 am