ಹುಬ್ಬಳ್ಳಿ: ಕೇಂದ್ರ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಬಗ್ಗೆ ಹಗುರವಾಗಿ ಮಾತನಾಡಿದ್ದು, ಖಂಡನೀಯ, ಬಾಬಾ ಸಾಹೇಬ್ ಅಂಬೇಡ್ಕರ್ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಿ, ಅಂಬೇಡ್ಕರ್ ಅವರನ್ನು ಮುಟ್ಟಿದರೇ ಸುಟ್ಟು ಹೋಗ್ತಿರಾ ಎಂದು ಶಾಸಕ ಪ್ರಸಾದ್ ಅಬ್ಬಯ್ಯ ಎಚ್ಚರಿಕೆ ನೀಡಿದರು.
ಹುಬ್ಬಳ್ಳಿಯ ಬಂದ್ ಪ್ರತಿಭಟನೆ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮೋದಿ ಮೋದಿ ಅನ್ನೋದು ನಿಮಗೆ ಫ್ಯಾಷನ್ ಆಗಿರಬಹುದು, ಅಂಬೇಡ್ಕರ್ ನಮ್ಮ ಪ್ರಾಣ, ಉಸಿರು, ಅಂಬೇಡ್ಕರ್ ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ, ಅಂಬೇಡ್ಕರ್ ವಿಶ್ವ ನಾಯಕ, ಸಂವಿಧಾನವನ್ನ ವಿಶ್ವವೇ ಒಪ್ಪಿಕೊಂಡಿದೆ.
ನಾವು ಶಾಸಕ, ಮಂತ್ರಿ, ಪ್ರಧಾನಿ ಆಗಿದ್ದೇ ಅಂಬೇಡ್ಕರ್ ಕೊಟ್ಟ ಭಿಕ್ಷೆ, ಅಂಬೇಡ್ಕರ್ ಕೊಟ್ಟ ಸಂವಿಧಾನದ ಮೇಲೆ ಅಧಿಕಾರಕ್ಕೆ ಬಂದು ಅಂಬೇಡ್ಕರ್ ಅನ್ನೋದು ಫ್ಯಾಷನ್ ಆಗಿದೆ, ದೇವರನ್ನ ನೆನಸಿದ್ರೆ ಸ್ವರ್ಗಕ್ಕೆ ಹೋಗ್ತಿದ್ರಿ ಅಂತೀರಾ,? ನಾವೆಲ್ಲಾ ಊರು ಹೊರಗೆ ಇರ್ತಿದ್ವಿ, ಇವತ್ತು ನಿಮ್ಮನ್ನ ಆಳುವ ಶಕ್ತಿ ಕೊಟ್ಟಿದ್ದು, ಅಂಬೇಡ್ಕರ್ ಎಂದು ಕಿಡಿಕಾರಿದ್ದಾರೆ.
'ನಮಗೆ ಎಲ್ಲಾ ಸೌಲಭ್ಯ, ಶಕ್ತಿ ಕೊಟ್ಟ ನಾಯಕ ಬಾಬಾ ಸಾಹೇಬ್ ಅಂಬೇಡ್ಕರ್, ಅಂಬೇಡ್ಕರ್ ಕೊಟ್ಟ ಸಂವಿಧಾನದಲ್ಲೇ ಸ್ವರ್ಗ ಕಾಣುತ್ತೇವೆ. ನಿಮಗೆ ಮೋದಿಯವರಿಗೆ ಅಲ್ಲೆಲ್ಲೋ ಸ್ವರ್ಗ ಇದೇ ಅಂದ್ರಲ್ಲ ಅಲ್ಲಿ ಹೋಗಬಹುದು ನೀವು,
ಇವತ್ತು ಮನುವಾದಿಗಳು ಸಂವಿಧಾನವನ್ನು ಒಪ್ಪಿಕೊಂಡವರಲ್ಲ ಬಸವಣ್ಣ, ಅಂಬೇಡ್ಕರ್ ಕಂಡ ಜಾತಿ, ವರ್ಗ, ವರ್ಣ, ಲಿಂಗ ರಹಿತ ಸಮಾಜದ ಕನಸ್ಸು. ಆದ್ರೆ ಅವರಿಗೆ ಇದು ಬೇಕಾಗಿಲ್ಲ, ಅವರ ಕೈ ಕೆಳಗೆ ಇರಬೇಕು. ಜಾತಿ ವ್ಯವಸ್ಥೆಯೆ ಅವರಿಗೆ ಪವಿತ್ರ ಎಂದು ಶಾಸಕ ಅಬ್ಬಯ್ಯ ಕಿಡಿಕಾರಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
09/01/2025 05:12 pm