ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ ಧಾರವಾಡ ಬಂದ್ : ವಾಹನಗಳ ಟೈಯರ್ ಗಾಳಿ ಬಿಟ್ಟು ಎಚ್ಚರಿಕೆ ಕೊಟ್ಟ ಹೋರಾಟಗಾರರು

ಹುಬ್ಬಳ್ಳಿ : ಕ್ಷಣದಿಂದ ಕ್ಷಣಕ್ಕೆ ಹುಬ್ಬಳ್ಳಿ ಧಾರವಾಡ ಬಂದ್ ಹೋರಾಟ ಹುಬ್ಬಳ್ಳಿಯಲ್ಲಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಸಂಚಾರಕ್ಕೆ ಮುಂದಾದ ವಾಹನ ಸವಾರರಿಗೆ ಚಾಲಕರಿಗೆ ದಲಿತ ಸಂಘಟನೆಯ ಮುಖಂಡರು ಎಚ್ಚರಿಕೆ ನೀಡಿದ್ದು, ಹಿಂದೆ ಹೋಗದಿದ್ದರೇ ಟೈಯರ್ ಗಾಳಿಯನ್ನು ಬಿಡುವುದಾಗಿ ಎಚ್ಚರಿಕೆ ನೀಡಿದ್ದು, ಬಹುತೇಕ ವಾಹನಗಳ ಗಾಳಿಯನ್ನು ಬಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ.

ಹೌದು..ಹುಬ್ಬಳ್ಳಿಯ ಕಾರವಾರ ರಸ್ತೆ, ಚೆನ್ನಮ್ಮ ವೃತ್ತದ ಬಳಿಯಲ್ಲಿ ಹಲವಾರು ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿದ್ದು, ಈ ಹಿನ್ನೆಲೆಯಲ್ಲಿ ಸರ್ಕಲ್ ಗೆ ಬಂದ ವಾಹನಗಳ ಟೈಯರ್ ಗಾಳಿಯನ್ನು ಬಿಡುವ ಮೂಲಕ ವಾಹನ ಸವಾರರಿಗೆ ಎಚ್ಚರಿಕೆ ನೀಡಿದರು. ಅಲ್ಲದೇ ಚೆನ್ನಮ್ಮ ವೃತ್ತದಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದ ಕಾರ್ಯಕರ್ತರು ಹುಬ್ಬಳ್ಳಿಯನ್ನು ಬಂದ್ ಮಾಡಿ ಹೋರಾಟ ನಡೆಸುತ್ತಿದ್ದಾರೆ.

Edited By : Shivu K
Kshetra Samachara

Kshetra Samachara

09/01/2025 09:22 am

Cinque Terre

43.57 K

Cinque Terre

2

ಸಂಬಂಧಿತ ಸುದ್ದಿ