ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಬೆಳ್ಳಂಬೆಳಿಗ್ಗೆಯೇ ಕಾವು ಪಡೆದ ಪ್ರತಿಭಟನೆ, ಅಂಗಡಿ, ಮುಂಗಟ್ಟುಗಳು ಬಂದ್

ಧಾರವಾಡ : ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಕುರಿತಾಗಿ ನೀಡಿದ್ದಾರೆನ್ನಲಾದ ಹೇಳಿಕೆ ವಿರೋಧಿಸಿ ದಲಿತಪರ ಸಂಘಟನೆಗಳು ಇಂದು ಹುಬ್ಬಳ್ಳಿ, ಧಾರವಾಡ ಅವಳಿನಗರ ಬಂದ್‌ಗೆ ಕರೆ ನೀಡಿವೆ.

ಧಾರವಾಡದಲ್ಲಿ ಬೆಳ್ಳಂಬೆಳಿಗ್ಗೆಯೇ ದಲಿತ ಮುಖಂಡರಿಂದ ಪ್ರತಿಭಟನೆ ನಡೆದಿದೆ. ಅಮಿತ್ ಶಾ ಅವರ ಪ್ರತಿಕೃತಿಗೆ ಬೆಂಕಿ ಹಚ್ಚಿ ದಲಿತ ಮುಖಂಡರು ಧಾರವಾಡದ ಜ್ಯುಬಿಲಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಧಾರವಾಡದ ಭಾಗಶಃ ಅಂಗಡಿ, ಮುಂಗಟ್ಟುಗಳು ಬಂದ ಆಗಿವೆ. ಧಾರವಾಡದ ಜ್ಯುಬಿಲಿ ವೃತ್ತ ಹಾಗೂ ಪ್ರಮುಖ ರಸ್ತೆಗಳು ವಾಹನಗಳಿಲ್ಲದೇ ಬಿಕೋ ಎನ್ನುತ್ತಿವೆ. ಕೆಲ ಪ್ರಯಾಣಿಕರು ಬಸ್ಸಿಗಾಗಿ ಕಾಯುತ್ತ ನಿಂತಿರುವ ದೃಶ್ಯಗಳೂ ಕಂಡು ಬಂತು. ಇನ್ನು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಪಿಯು ಕಾಲೇಜುಗಳು ಮಾತ್ರ ಎಂದಿನಂತೆ ಕಾರ್ಯನಿರ್ವಹಿಸುತ್ತವೆ ಎಂದು ಕೆಲ ವಿದ್ಯಾರ್ಥಿಗಳು ಕಾಲೇಜಿಗೆ ಬಂದ ದೃಶ್ಯಗಳೂ ಕಂಡು ಬಂದವು. ಕೆಲ ಸಾರ್ವಜನಿಕರು ಬಂದ್ ಅರಿವಿಲ್ಲದೇ ಧಾರವಾಡಕ್ಕೆ ಬಂದಿದ್ದು ವಾಹನಗಳಿಗಾಗಿ ಕಾಯುತ್ತ ನಿಂತ ಪ್ರಸಂಗ ನಡೆದಿದೆ. ಒಟ್ಟಾರೆ ಧಾರವಾಡದಲ್ಲಿ ಬೆಳ್ಳಂಬೆಳಿಗ್ಗೆಯೇ ಪ್ರತಿಭಟನೆ ಕಾವು ಪಡೆದುಕೊಂಡಿದೆ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

09/01/2025 08:35 am

Cinque Terre

99.17 K

Cinque Terre

1

ಸಂಬಂಧಿತ ಸುದ್ದಿ