ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಪ್ರತಿಷ್ಠಿತ ಇಂಪಲ್ ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಸಹಯೋಗಯೊಂದಿಗೆ ಎಸ್. ಎಸ್. ಎಲ್.ಸಿ. ಫಲಿತಾಂಶ ಸುಧಾರಣೆಗೆ ಸಂಬಂಧಿಸಿದಂತೆ 2025ರ ಜನೇವರಿ 6 ಮತ್ತು 7 ನೇ ದಿನಾಂಕದಂದು 2 ದಿನಗಳ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಾಗಾರವು ಯಶಸ್ವಿಯಾಗಿ ಸಂಪನ್ನಗೊಂಡಿದ್ದು, ನೂರಾರು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡಿದ್ದಾರೆ.
ನಿರಂತರ ಅಧ್ಯಯನದಿಂದ ಯಶಸ್ಸು ಸಾಧ್ಯ ಎಂಬುವಂತ ಅಭಿಮತವನ್ನು ಪ್ರಮೋದ ರಾಯಚೂರ ಮತ್ತು ಶೈಕ್ಷಣಿಕ ನಿರ್ದೇಶಕರಾದ ಎಸ್. ಬಿ. ಹಿರೇಮಠ ಮತ್ತು ಪ್ರಾಚಾರ್ಯರರಾದ ಬಸವರಾಜ ಚಿನಿವಾಲರ ವ್ಯಕ್ತಪಡಿಸಿದರು.
ಕಾರ್ಯಾಗಾರವನ್ನು "ಹಸಿರನ್ನೇ ಉಸಿರಾಗಿಸಿ ಹಸಿರಿನ ಜೊತೆಗೆ ಜೀವನ ನಡೆಸೋಣ" ಎಂಬ ಸಂದೇಶದೊಂದಿಗೆ ಸಸಿಗೆ ನೀರೆರೆಯುವ" ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕಾರ್ಯಾಗಾರರದ ಮುಖ್ಯ ಅತಿಥಿ ಸ್ಥಾನವನ್ನು ಪ್ರಮೋದ ರಾಯಚೂರರವರು ಅಲಂಕರಿಸಿದ್ದು ಕಾರ್ಯಕ್ರಮದ ನಿರೂಣೆಯನ್ನು ಆಶಾ ಬದ್ರಿ ಮತ್ತು ಮಂಜುಳಾ ಕಟ್ಟಿರವರು ನೆರವೇರಿಸಿದರು.
ಅತಿಥಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳನ್ನು ಸುಜಾತಾ ಎನ್ ಎಮ್ ರವರು ಪರಿಚಯಿಸಿದರು ವಂದನಾರ್ಪಣೆಯನ್ನು ಸುಮಯಾ ಬೆಳಗಲಿ ಅವರು ಮಾಡಿದರು. ಈ ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾದ ಪ್ರತಿಭಾ ಹೂಗಾರ, ರಾಜಶ್ರೀ ಬೀಡಿ, ಕೃಷ್ಣಾ ತಿರುಮಲಮಠರವರು ಆಗಮಿಸಿದ್ದರು ಜೊತೆಗೆ ಲಕ್ಷ್ಮೀ ಹೀರೇಮಠ, ವಿವೇಕ ಅಕ್ಕಾಡಮಿಯ ಸಂಸ್ಥಾಪಕರಾದ ನಾಗೇಶ ಗುಳೇದಗುಡ್ಡ ಅವರು ಆಗಮಿಸಿದ್ದರು.
ಈ ಕಾರ್ಯಾಗಾರದಲ್ಲಿ ಸುಮಾರು 350 ಹೆಚ್ಚು ವಿದ್ಯಾರ್ಥಿಗಳು ವಿವಿಧ ಶಾಲೆಗಳಿಂದ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಗಣಿತ ಮತ್ತು ವಿಜ್ಞಾನ ವಿಷಯಗಳ ಕುರಿತು ಅಂದರೆ ಪ್ರಶ್ನೆಪತ್ರಿಕೆಗಳ ಸ್ವರೂಪ ಮತ್ತು ನೀಲನಕ್ಷೆ, ಸಮಯ ನಿರ್ವಹಣೆಯ ಜೊತೆಗೆ ಉತ್ತರಿಸುವ ಕೌಶಲ್ಯಗಳ ಕುರಿತು ಉಪನ್ಯಾಸಕರು ಮಾಹಿತಿಯನ್ನು ನೀಡಿದರು.
ಇಂಪಲ್ಸ್ ಮಹಾವಿದ್ಯಾಲಯದ ಉಪನ್ಯಸಕರಾದ ಆರ್ ಡಿ. ಶೇಖ, ಶಿಲ್ಪಾ ಎನ್ ಎಮ್ ಹಾಗೂ ರಾಜೇಶ್ವರಿರವರು ಪ್ರಯೋಗಳ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ನಡೆಸಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ವಿತರಿಸಿದರು. ಸದರಿ ಕಾರ್ಯಕ್ರಮದ ಕೊನೆಯಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
Kshetra Samachara
07/01/2025 06:27 pm