ಹುಬ್ಬಳ್ಳಿ: ಪ್ರತಿಯೊಬ್ಬರ ಜೀವನದಲ್ಲಿ ಮೂಲ ಬುನಾದಿ ಅಂದ್ರೆ ಅದು ಪ್ರಾಥಮಿಕ ಶಾಲೆ. ಈ ಶಾಲಾ ಹಂತದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದ್ರೆ ಅವರು ಸಮಾಜಕ್ಕೆ ಒಂದು ದೊಡ್ಡ ಕೊಡುಗೆಯಾಗುತ್ತಾರೆ. ಅದೇ ರೀತಿ ಹುಬ್ಬಳ್ಳಿಯ ಗ್ರೋಯಿಂಗ್ ಬಡ್ಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಶಿಕ್ಷಣ ಕ್ಷೇತ್ರದಲ್ಲಿ ಹೆಮ್ಮರವಾಗಿ ಬೆಳೆದಿದ್ದು, ಅದೆಷ್ಟೋ ಬಡ ಮಕ್ಕಳಿಗೆ ದಾರಿದೀಪವಾಗಿದೆ. ಸದ್ಯ ಫ್ಲೈ ಹೋಮ್ ನರ್ಸರಿಯಿಂದ 6ನೇ ತರಗತಿವರೆಗೆ ಗ್ರೋಯಿಂಗ್ ಬಡ್ಸ್ ಸ್ಕೂಲ್ ಹೊಂದಿದ್ದು, ಸಂಸ್ಕಾರದೊಂದಿಗೆ ಶಿಕ್ಷಣ ನೀಡಲಾಗುತ್ತಿದೆ.
ಎಸ್,,, ಬಡವರು ಶ್ರಮಿಕರು ಹಾಗೂ ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಗ್ರೋಯಿಂಗ್ ಬಡ್ಸ್ ಶಾಲೆಯ ಚೇರ್ಮನ್, ದುರ್ಗಾ ಡೆವಲಪರ್ಸ್ ಮುಖ್ಯಸ್ಥರಾದ ಹನಮಂತಪ್ಪ ಬಿ. ಮ್ಯಾಗೇರಿ ಅವರು ಶಿಕ್ಷಣ ಸಂಸ್ಥೆಯನ್ನೇ ಕಟ್ಟಿದ್ದಾರೆ. ಹನಮಂತಪ್ಪ ಮ್ಯಾಗೇರಿ ಅವರು ಮೂರನೇ ತರಗತಿವರೆಗೆ ಮಾತ್ರ ಶಾಲೆಯನ್ನು ಕಲಿತಿದ್ದಾರೆ. ಯಾವ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಮುತ್ತಮ್ಮ ಎಜುಕೇಶನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಮೂಲಕ, 2016ರಲ್ಲಿ ಗ್ರೋಯಿಂಗ್ ಬಡ್ಸ್ ಶಾಲೆಯನ್ನು ನಿರ್ಮಾಣ ಮಾಡಿದ್ದಾರೆ. ಈಗ ಈ ಶಾಲೆಯಲ್ಲಿ ನೂರಾರು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಶಿಕ್ಷಣ ಸಂಸ್ಥೆ ಎರಡು ಬ್ರ್ಯಾಂಚ್‌ಗಳನ್ನು ಹೊಂದಿದ್ದು, ಹುಬ್ಬಳ್ಳಿಯ ಕುಸುಗಲ್ ರೋಡ್ ಮಹಾದುರ್ಗಾ ಕಾಲೋನಿಯಲ್ಲಿ ಉತ್ತಮವಾದ ಬಿಲ್ಡಿಂಗ್‌ನ್ನು ಹೊಂದಿದ್ದು, ಎರಡು ಫ್ಲೋರ್ ಶಾಲೆಯನ್ನು ನಿರ್ಮಾಣ ಮಾಡಿದ್ದಾರೆ. ಅದೇ ರೀತಿ ಹುಬ್ಬಳ್ಳಿ ಶಾಂತಿ ನಗರ ನಬಿ ಕಾಲೋನಿಯಲ್ಲಿ ಶಾಲೆಗಳನ್ನು ಹೊಂದಿದ್ದು, ಅತ್ಯಾಧುನಿಕ ಸಲಕರಣೆ ಸೌಲಭ್ಯಗಳೊಂದಿಗೆ ನುರಿತ ಸಿಬ್ಬಂದಿ ಹಾಗೂ ಸಮರ್ಥ ಆಡಳಿತ ಮಂಡಳಿಯಿಂದಾಗಿ ಈ ಶಿಕ್ಷಣ ಸಂಸ್ಥೆ ಶಿಕ್ಷಣ ಹುಬ್ಬಳ್ಳಿಯಲ್ಲಿ ಮಹತ್ವದ ಮೈಲಿಗಲ್ಲನ್ನು ಹುಟ್ಟು ಹಾಕಿದೆ. 9 ವರ್ಷಗಳಿಂದ ಮಕ್ಕಳಿಗೆ ಅತೀ ಕಡಿಮೆ ಮೊತ್ತದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಾ ಬಂದಿದೆ.
ಇನ್ನು ಈ ಗ್ರೋಯಿಂಗ್ ಬಡ್ಸ್ ಇಂಗ್ಲಿಷ್ ಮೀಡಿಯಮ್ ಸ್ಕೂಲ್ ಬಡವರ ಜ್ಞಾನ ದಾಸೋಹ ಶಾಲೆ ಎಂದೆ ಗುರುತಿಸಿಕೊಂಡಿದೆ. ಅತೀ ಸಾಂಸ್ಕೃತಿಕವಾಗಿ ಇಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿದ್ದು, ಬೆಳಗಿನ ಜಾವ ಪ್ರಾರ್ಥನೆ ಮಾಡಿಸಿ ಮಕ್ಕಳ ಬಾಯಲ್ಲಿ ಓಂಕಾರ ಹೇಳಿಸುತ್ತಾರೆ. ಇದು ಕೇಳಲು ನೋಡಲು ಅದೆಷ್ಟು ಚಂದ ಅಲ್ವಾ?
ಇನ್ನು ನೂರಿತ ಶಿಕ್ಷಕರು ಈ ಶಾಲೆಯಲ್ಲಿ ಬೋಧನೆ ಮಾಡುತ್ತಿದ್ದಾರೆ. ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ಕ್ಲಾಸ್, ಅಬ್ಯಾಕಸ್, LKG, UKG ಮಕ್ಕಳಿಗೆ ಆಟವಾಡಲು ಪ್ಲೇ ಹೋಮ್, ಉತ್ತಮವಾದ ಪ್ಲೇ ಗ್ರೌಂಡ್ ಇದೆ. ಎಲ್ಲ ರೀತಿಯ ಸ್ಪೋರ್ಟ್ಸ್ ಆ್ಯಕ್ಟಿವಿಟಿಸ್ ನಡೆಸಲು ದೈಹಿಕ ಶಿಕ್ಷಣ ಶಿಕ್ಷಕರು ಇದ್ದಾರೆ. ಕರಾಟೆ ಕ್ಲಾಸ್‌ಗಳಿವೆ, ನುರಿತ ಶಿಕ್ಷಕರಿಂದ ಮಕ್ಕಳು ಅದೆಷ್ಟು ಚನ್ನಾಗಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸದ್ಯ ಈ ಶಾಲೆಯಲ್ಲಿ ಫ್ರೀ ನರ್ಸರಿಯಿಂದ 6ನೇ ತರಗತಿ ವರೆಗೆ ಕ್ಲಾಸ್‌ಗಳು ನಡೆಯುತ್ತಿವೆ. ಮುಂದಿನ ವರ್ಷ 7ನೇ ವರ್ಗ ಆರಂಭವಾಗುತ್ತದೆ. ತದನಂತರ ಪ್ರತಿ ವರ್ಷ ಕಳೆದಂತೆ ಈ ಶಾಲೆಯಲ್ಲಿ 10ನೇ ತರಗತಿವರೆಗೂ ಕ್ಲಾಸ್‌ಗಳು ಆರಂಭವಾಗುತ್ತದೆ. ಅಷ್ಟೇ ಅಲ್ಲದೆ ಬಾಯ್ಸ್ ಆ್ಯಂಡ್ ಗರ್ಲ್ಸ್ ಹಾಸ್ಟಲ್ ವ್ಯವಸ್ಥೆ ಮಾಡಲಾಗುತ್ತಿದೆ. ಉತ್ತಮವಾದ ಪ್ರಕೃತಿಯಲ್ಲಿ ಗ್ರೋಯಿಂಗ್ ಬಡ್ಸ್ ಶಾಲೆ ನಿರ್ಮಾಣವಾಗಿದೆ. ಈ ಶಾಲೆಯಲ್ಲಿ ಏನೆಲ್ಲ ಸ್ಪೆಷಾಲಿಟಿ ಇವೆ ಎಂಬುದನ್ನು ಪ್ರಿನ್ಸಿಪಾಲ್ ಸ್ವಾತಿ ಕೆ. ಅವರು ಹೇಳುತ್ತಾರೆ ಕೇಳಿ.
ಒಟ್ಟಿನಲ್ಲಿ ಶೈಕ್ಷಣಿಕ ಸೇವೆಯಲ್ಲಿ ಅವಿಸ್ಮರಣೀಯ ಸಾಧನೆಯನ್ನು ಮಾಡಿರುವ ಗ್ರೋಯಿಂಗ್ ಬಡ್ಸ್ ಸ್ಕೂಲ್ ಕಾರ್ಯ ಶ್ಲಾಘನೀಯ. ಅದೆಷ್ಟೋ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯ ಕಲ್ಪಿಸಿರುವ ಮುತ್ತಮ್ಮ ಎಜುಕೇಶನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಶಿಕ್ಷಣ ಸಂಸ್ಥೆ ಇನ್ನೂ ಉತ್ತುಂಗ ಶಿಖರವನ್ನು ಏರಲಿ ಎಂಬುವುದು ಪಬ್ಲಿಕ್ ನೆಕ್ಸ್ಟ್ ಆಶಯ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
05/01/2025 10:38 am