ಹುಬ್ಬಳ್ಳಿ: ಟೊಮ್ಯಾಟೊ.. ಟೊಮ್ಯಾಟೊ..! ಈರುಳ್ಳಿ, ಬೆಳ್ಳುಳ್ಳಿ, ಮೂಲಂಗಿ, ಸೊಪ್ಪು, ತರಕಾರಿ..ಬರ್ರೀ.. ತಗೋಳ್ರಿ..! ಹೀಗೊಂದು ಪುಟಾಣಿಗಳ ಮಾರಾಟದ ಕೂಗು ನಿಜಕ್ಕೂ ಎಲ್ಲರನ್ನೂ ಆಕರ್ಷಿಸುವಂತೆ ಮಾಡಿದೆ. ಮಕ್ಕಳಿಗೆ ಶೈಕ್ಷಣಿಕ ತರಬೇತಿ ಎಷ್ಟು ಮುಖ್ಯವೋ, ವ್ಯವಹಾರ ಜ್ಞಾನವೂ ಅಷ್ಟೇ ಮುಖ್ಯ. ಈ ನಿಟ್ಟಿನಲ್ಲಿ ವಾಣಿಜ್ಯನಗರಿ ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ಲ್ಯಾಮಿಂಗ್ಟನ್ ಶಾಲೆಯಲ್ಲಿ ಮಕ್ಕಳ ಸಂತೆಯನ್ನು ಹಮ್ಮಿಕೊಳ್ಳಲಾಗಿತ್ತು.
ಮಕ್ಕಳಲ್ಲಿ ಮಾರುಕಟ್ಟೆಯ ಜ್ಞಾನದ ಜೊತೆಗೆ ಸಾರ್ವಜನಿಕರ ಒಡನಾಟ ಕೂಡ ಅತಿಮುಖ್ಯ. ಪಠ್ಯೇತರ ಚಟುವಟಿಕೆ ಭಾಗವಾಗಿ ಐದರಿಂದ ಏಳನೇ ತರಗತಿಯವರೆಗಿನ 200 ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ವಿನೂತನ ಕಾರ್ಯಕ್ಕೆ ಶಾಲೆಯ ಆಡಳಿತ ಮಂಡಳಿ ಮುಂದಾಗಿದೆ. ಲ್ಯಾಮಿಂಗ್ಟನ್ ಪ್ರಾಥಮಿಕ ಕನ್ನಡ ಮತ್ತು ಆಂಗ್ಲ ಮಾಧ್ಯಮದ ಶಾಲೆಯ ಆವರಣದಲ್ಲಿ ಇಂತಹದೊಂದು ಪ್ರಯತ್ನಕ್ಕೆ ಮುಂದಾಗಿದ್ದು, ಮಕ್ಕಳ ಪಾಲಕರು ಹಾಗೂ ಸಾರ್ವಜನಿಕರು ಭಾಗವಹಿಸಿ ಮಕ್ಕಳ ಸಂತೆಯಲ್ಲಿ ಖರೀದಿ ಮಾಡುವ ಮೂಲಕ ಹೊಸ ಮೆರಗನ್ನು ತಂದರು.
ಪ್ಲಾಸ್ಟಿಕ್ ಬ್ಯಾನ್ ಮಾಡಿ ಬೇಕರಿ ಪದಾರ್ಥವಿಲ್ಲದೇ ಸೊಪ್ಪು ತರಕಾರಿ, ಕುಂಬಾರಕಿ ವಸ್ತುಗಳು, ಮನೆ ಬಳಕೆ ವಸ್ತುಗಳ ಮಾರಾಟ ಮಾಡುವ ಮೂಲಕ ನಿಜಕ್ಕೂ ಬಹುದೊಡ್ಡ ಸಂತೆಯ ಮೆರಗನ್ನು ತಂದಿದ್ದಾರೆ.ಮಕ್ಕಳಲ್ಲಿ ಸಾಮನ್ಯ ಜ್ಞಾನ ಬೆಳೆಯಲಿ ಎನ್ನುವ ಉದ್ದೇಶ ಇದಾಗಿದೆ. ರೈತನ ಕಷ್ಟ ತಿಳಿಸುವ ಉದ್ಧೇಶ ಇದಾಗಿದ್ದು, ಅಕ್ಷರ ಜ್ಞಾನದ ಜೊತೆಗೆ ಜನರ ಜೊತೆಗೆ ಬಾಂಧವ್ಯ ಬೆಳೆಸಲು ಒಂದು ಪ್ರಯತ್ನ ಮಾಡಿದ್ದು, ನಿಜಕ್ಕೂ ವಿಶೇಷವಾಗಿದೆ.
ಮಲ್ಲೇಶ್ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
Kshetra Samachara
01/01/2025 07:30 am