ಹುಬ್ಬಳ್ಳಿ: ಕೇಂದ್ರ ಸರ್ಕಾರ ಸಬ್ಸಿಡಿ ಕೊಟ್ಟ ನಂತರ ನಮಗೆಲ್ಲರಿಗೂ ವಸ್ತುಗಳ ಬೆಲೆ ಕಡಿಮೆ ಆಗುತ್ತೆ, ಎಲ್ಲದಕ್ಕೂ ಪ್ರತಿಭಟನೆ ಮಾಡುವ ಬಿಜೆಪಿಗರು ಜಿಎಸ್‌ಟಿ ಜಾಸ್ತಿ ಮಾಡಿದಾಗ ಯಾಕೆ ಪ್ರಶ್ನೆ? ಮಾಡಲಿಲ್ಲ,
ಹುಬ್ಬಳ್ಳಿಯಲ್ಲಿ ಮಾತನಾಡಿದ ಲಾಡ್, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, 'ಮೈ ಪ್ಯಾಜ್ ನಹಿ ಕಾತಿ ಹೂ' ಏನು ಹಾಗಂದ್ರೆ, ಇಂತಹ ಹಾರಿಕೆ ಉತ್ತರಗಳು ಎಷ್ಟರ ಮಟ್ಟಿಗೆ ಸರಿ.?ಇಂತಹ ಮಾತುಗಳು ಇವರಿಗೆ ಶೋಭೆ ತರಲ್ಲ ಎಂದು ಸಚಿವ ಲಾಡ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
'ನಾವು ಕೊಟ್ಟಾದರೂ ಕೊಡ್ತಾ ಇದ್ದೇವೆ ಬಿಜೆಪಿಯವರು ಏನು ಕೊಟ್ಟಿದ್ದಾರೆ, ಬಿಜೆಪಿ ಒಂದು ಕಡೆ ಕೊಟ್ಟು ಇನ್ನೊಂದು ಕಡೆ ಕಿತ್ತು ಕೊಳ್ಳುತ್ತಾ ಇದೆ. ದೇಶವನ್ನು ಕೊಳ್ಳೆ ಹೊಡೆಯುವಂತೆ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ಸಚಿವ ಸಂತೋಷ ಲಾಡ್ ಗಂಭೀರ ಆರೋಪಿಸಿದ್ದಾರೆ.
'ಮೋದಿ' ಕಿ ಗ್ಯಾರಂಟಿ ಅಂತ 80 ಕೋಟಿ ಜನರಿಗೆ ಅಕ್ಕಿ ಕೊಡ್ತಾ ಇದ್ದಾರಲ್ಲ, ಅದನ್ನು ಯಾರು ಕೊಟ್ಟಿದ್ದು? ದೇಶದಲ್ಲಿ ಒಂದು ಲಕ್ಷ 10 ಸಾವಿರ ಕೋಟಿ ಕೇಂದ್ರದಲ್ಲಿ ಬಜೆಟ್ ಇಟ್ಟು ಆಹಾರ ಭದ್ರತೆ ಕಾಯ್ದೆ ತಂದವರು
ಸೋನಿಯಾ ಗಾಂಧಿಯವ್ರು, ಅದು ಯುಪಿಐ ಸರ್ಕಾರ, ಅದನ್ನು 2 ರೂಪಾಯಿ ಸಬ್ಸಿಡಿ ಕೊಟ್ಟು ಬಿಜೆಪಿ 20 ಸಾವಿರ ಕೋಟಿ ಪಬ್ಲಿಸಿಟಿ ತಗೊಂಡ್ರು ಎಂದು ಹರಿಹಾಯ್ದಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
05/01/2025 02:54 pm