ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : "ಅಮಾಯಕ ದಲಿತ ಸಂಘಟನೆಗಳಿಗೆ ಕಾಂಗ್ರೆಸ್ ಕುಮ್ಮಕ್ಕು ನೀಡ್ತಿದೆ" -ಎಸ್‌ಸಿ ಮೋರ್ಚಾ ಮಹೇಂದ್ರ ಕೌತಾಳ ಕಿಡಿ

ಹುಬ್ಬಳ್ಳಿ: ಇಡೀ ದೇಶದಲ್ಲಿ ಸಂವಿಧಾನ ವಿಷಯ ಚರ್ಚೆ ಆಗುತ್ತಿದೆ, ಸಂವಿಧಾನ ಬೆಳೆಸಲು, ರಕ್ಷಿಸಲು ಬಿಜೆಪಿ ಪ್ರಯತ್ನ ಮಾಡ್ತಾ ಇದೆ. ಸಂಸತನಲ್ಲಿ ಅಮಿತ್ ಶಾ ಅವರು ಅಂಬೇಡ್ಕರ್‌ಗೆ ಆಗಿರುವ ಅನ್ಯಾಯದ ಬಗ್ಗೆ ಹೇಳ್ತಾರೆ. ಅವರ ಹೇಳಿಕೆಯ ವಿಡಿಯೋ ಕತ್ತರಿಸಿ ವಿರೋಧ ಪಕ್ಷ ಹರಿಬಿಟ್ಟಿದೆ. ಅಮಾಯಕ ದಲಿತ ಸಂಘಟನೆಗಳಿಗೆ ಕಾಂಗ್ರೆಸ್ ಕುಮ್ಮಕ್ಕು ನೀಡುತ್ತಿದೆಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೌತಾಳ ಕಿಡಿಕಾರಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಹೆಸರು ನಿಮಗೆ ಫ್ಯಾಷನ್ ಆಗಿದೆ ಅಂತ ಕಾಂಗ್ರೆಸ್‌ಗೆ ಹೇಳಿದ್ದಾರೆ. ಅಂಬೇಡ್ಕರ್ ಅವರಿಗೆ ಹೆಚ್ಚು ಅನ್ಯಾಯ ಮಾಡಿದ್ದೆ ಕಾಂಗ್ರೆಸ್‌ ಅಂದಿದ್ರು. ಅದನ್ನ ಎಡಿಟ್ ಮಾಡಿ ವೈರಲ್ ಮಾಡುವ ಕೆಲಸ ಕಾಂಗ್ರೆಸ್‌ ಮಾಡಿದೆ. ಶಾಸಕ ಪ್ರಸಾದ್ ಅಬ್ಬಯ್ಯ ದಲಿತ ಸಂಘಟನೆಗಳನ್ನು ಕರೆಯಿಸಿ ಹೋರಾಟ ಮಾಡೋಕೆ ಹಚ್ಚುತ್ತಾರೆ.

ಆರ್‌ಎಸ್‌ಎಸ್ ಮೇಲೆ ಅಬ್ಬಯ್ಯ ಆಪಾಧನೆ ಮಾಡ್ತಾರೆ, ಅವರ ಮೇಲೆ ದೂರು ಕೊಡಲು ಮುಂದಾಗಿದ್ದೇವೆ. ಇಂದಿರಾ ಗಾಂಧಿ 1979ರಲ್ಲಿ ಎಮರ್ಜನ್ಸಿ ಹಾಕಿದ್ರಲ್ಲ, ಅವಾಗ ಸಂವಿಧಾನ ಸುಟ್ಟು ಹೋಗಲಿಲ್ವಾ .? ಅಂಬೇಡ್ಕರ್‌ ಅವರಿಗೆ ಅವಮಾನ ಮಾಡಿದ್ದೇ ಕಾಂಗ್ರೇಸ್, ಅವರ ಹೆಸರ ಮೇಲೆ ಚುನಾವಣೆ ಗೆದ್ದಿದ್ದೀರಿ, ನಿಮಗೆ ನಾಚಿಕೆ ಆಗಬೇಕು.

ನಮಗೆ ದಾಖಲೆ ಕೊಡಿ, ಇಲ್ಲಾಂದ್ರೆ ಹೋರಾಟನೂ ಮಾಡ್ತೇವೆ, ಕೇಸ್ ಕೂಡ ಹಾಕ್ತೀವೆ. ಈಗ ಹೋರಾಟಕ್ಕೆ ಮುಂದಾಗಿದ್ದೀರಿ, ಮಾಡಿ ಅದನ್ನ ತಡೆಯೋ ಅಧಿಕಾರ ಇಲ್ಲ, ಪೊಲೀಸ್ ಕಮಿಷ್‌ನರ್, ಡಿಸಿ ಅವರೇ ಸುಪ್ರೀಂ ಕೋರ್ಟ್‌ನ ನಿಯಮದ ಪ್ರಕಾರ ಅವಕಾಶ ಕೊಟ್ಟಿದ್ದೀರಾ. ಅಂಬೇಡ್ಕರ್ ಬಗ್ಗೆ ಮಾತನಾಡಿದ್ರೆ ನಾವು ಕೂಡ ಸುಮ್ನೆ ಕೂರಲ್ಲ, ರಾಹುಲ್ ಗಾಂಧಿ ಸಂವಿಧಾನ ಬದಲಾವಣೆ ಹೇಳಿಕೆ ಕೊಟ್ಟಾಗ ದಲಿತ ಸಂಘಟನೆಗಳು ಮಲಗಿದ್ರಾ..? ಎಂದರು.

Edited By : Manjunath H D
Kshetra Samachara

Kshetra Samachara

07/01/2025 03:43 pm

Cinque Terre

25.8 K

Cinque Terre

5

ಸಂಬಂಧಿತ ಸುದ್ದಿ