ಕುಂದಗೋಳ : ರೈತಾಪಿ ಜನರ ಭೂಮಿಯ ಹಳೆಯ ದಾಖಲೆಗಳನ್ನು ಸುರಕ್ಷತೆ ದೃಷ್ಟಿಯಿಂದ ಗಣಕೀಕೃತಗೊಳಿಸುವ ಕಾರ್ಯಕ್ರಮಕ್ಕೆ ಶಾಸಕ ಎಂ.ಆರ್.ಪಾಟೀಲ್ ಚಾಲನೆ ನೀಡಿದರು.
ಹೌದು ! ಕುಂದಗೋಳ ತಾಲೂಕಿನ ತಹಶೀಲ್ದಾರ್ ಕಚೇರಿ ದಾಖಲೆ ಸಂಗ್ರಹ ಕೊಠಡಿಯನ್ನು ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿದ ಅವರು ದಾಖಲೆಗಳನ್ನು ಗಣಕೀಕೃತ ಮಾಡುವ ವಿಧಾನವನ್ನು ಪರಿಶೀಲನೆ ನಡೆಸಿದರು.
ತಹಶೀಲ್ದಾರ್ ರಾಜು ಮಾವರಕರ ಕಚೇರಿಯಲ್ಲಿನ ಕಡತಗಳನ್ನು ಗಣಕೀಕೃತ ಮಾಡುವುದಿಂದ ಸುಲಭವಾಗಿ ರೈತರ ಅಗತ್ಯ ದಾಖಲೆಗಳನ್ನು ಎಷ್ಟೋ ವರ್ಷವಾದರೂ, ಯಾವುದೇ ಹಾನಿ ಮತ್ತು ಮಾಹಿತಿ ಬದಲಾವಣೆ ಇಲ್ಲದಂತೆ ಸಂರಕ್ಷಣೆ ಮಾಡಬಹುದು ಎಂದರು.
ಈ ಸಂದರ್ಭದಲ್ಲಿ ಕುಂದಗೋಳ ತಹಶೀಲ್ದಾರ್ ಕಚೇರಿಯ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಬಿಜೆಪಿ ಕಾರ್ಯಕರ್ತರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
Kshetra Samachara
06/01/2025 05:41 pm