ಹುಬ್ಬಳ್ಳಿ: ಬಸ್ ದರ ಏರಿಕೆ ಜನ ವಿರೋಧಿಯಾಗಿದ್ದು ಇದರಲ್ಲಿ ಎರಡು ಮಾತಿಲ್ಲ ಎಂದು ಸಂಸದ ಹಾಗೂ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.
ಬಸ್ ಟಿಕೆಟ್ ದರ ಏರಿಕೆ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಕ್ತಿ ಯೋಜನೆಗೆ ಕಾಲ ಕಾಲಕ್ಕೆ ಹಣ ಕೊಟ್ಟಿಲ್ಲ. ನಾನು ಸಿಎಂ ಆದಾಗ 4500 ಬಸ್ ಗಳಿಗೆ ಆದೇಶ ಮಾಡಿದ್ದೆ. ಅದೇ ಬಸ್ ಇವಾಗ ಬರ್ತಿವೆ. ಕೋವಿಡ್ ಸಮಯದಲ್ಲಿ ಲಾಸ್ ಆದ್ರೂ ಮಾಜಿ ಸಿಎಂ ಯಡಿಯೂರಪ್ಪನವರು ಸರಿಯಾಗಿ ಕೆಲಸ ಮಾಡಿದ್ದಾರೆಂದರು.
ಇನ್ನು ಬೆಲೆ ಏರಿಕೆಯಿಂದಾಗಿ ರಾಜ್ಯ ದಿವಾಳಿಯಾಗಿದೆ. ಎಲ್ಲ ದರವೂ ಹೆಚ್ಚಾಗಿದೆ, ಹಾಲು, ನೀರು, ಎಲ್ಲವೂ ದರ ಹೆಚ್ಚಾಗಿದೆ. ಮರಳಿಗೆ ದರ ಹೆಚ್ಚಾಗಲಿದೆ. ಗಾಳಿಗೆ ತೆರಿಗೆ ಹಾಕೋ ದಿನ ಬಹಳ ದೂರ ಇಲ್ಲ. ದುರಾಡಳಿತ, ಅಭಿವೃದ್ಧಿ ಶೂನ್ಯದ ಪ್ರತಿಫಲವೇ ದರ ಏರಿಕೆ ಎಂದು ಬೊಮ್ಮಾಯಿ ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದರು. ರಸ್ತೆಗಳು ತಗ್ಗು ಬಿದ್ದಿವೆ. ಅವರಿಗೆ ಒಂದು ಪ್ಯಾಚ್ ವರ್ಕ್ ಮಾಡೋಕೆ ಆಗಿಲ್ಲ. ಕಮಿಟಿ ಮಾಡಿದರೂ ಸಾಕ್ಷಿ ಇಲ್ಲ. ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದಂತೂ ನಿಜ. ಭ್ರಷ್ಟಾಚಾರದ ಕುರಿತು ಜನಸಾಮಾನ್ಯರೇ ಹೇಳುತ್ತಿದ್ದಾರೆ. ವಿದ್ಯಾನಿಧಿ, ಭಾಗ್ಯಲಕ್ಷ್ಮೀ ಇವುಗಳನ್ನೆಲ್ಲ ಕಾಂಗ್ರೆಸ್ ಮಾಡಿದೆಯಾ? ಸುಮ್ಮನೆ ವಿತಂಡವಾದ ಮಾಡಬಾರದು ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
06/01/2025 02:49 pm